ಪ್ಯಾರಿಸ್‌ ಮತ್ತೆ ಶೂಟ್ ಔಟ್: ಮೂವರು ಉಗ್ರರ ಹತ್ಯೆ

ಬುಧವಾರ, 18 ನವೆಂಬರ್ 2015 (12:14 IST)
ಪ್ಯಾರಿಸ್‌ನಲ್ಲಿ ಮತ್ತೆ ಶೂಟ್ ಔಟ್ ನಡೆದಿದ್ದು ಮೂವರು ಶಂಕಿತ ಉಗ್ರರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. 

ಉತ್ತರ ಪ್ಯಾರಿಸ್‌ನ ಸೇಂಟ್ ಡೆನಿಸ್ ಪ್ರದೇಶದಲ್ಲಿ ಉಗ್ರರು ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಇಬ್ಬರನ್ನು ಹೊಡೆದುರುಳಿಸಲಾಗಿದೆ.
 
ಐಸಿಸ್ ಉಗ್ರರ ಸರ್ವನಾಶಕ್ಕಾಗಿ ಫ್ರಾನ್ಸ್ ಪಣತೊಟ್ಟಿದ್ದು ನಗರದಲ್ಲಿ ಇನ್ನೂ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಪಾರ್ಟಮೆಂಟ್ ಒಂದರ ಮೇಲೆ ದಾಳಿ ನಡೆಸಿದ ಪ್ಯಾರಿಸ್ ಪೊಲೀಸರು ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ. ಮತ್ತೊಬ್ಬ ಉಗ್ರನನ್ನು ಪೊಲೀಸರು ಜೀವಂತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
 
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
 
ಕಳೆದ ವಾರ ಪ್ಯಾರಿಸ್‌ನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಐಸಿಸ್ ಉಗ್ರರು 129 ಜನರ ದುರ್ಮರಣಕ್ಕೆ ಕಾರಣರಾಗಿದ್ದರು. ಅಷ್ಟೇ ಅಲ್ಲದೆ 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅವರಲ್ಲಿ 221 ನಾಗರಿಕರು ಇನ್ನೂ ಆಸ್ಪತ್ರೆಗಳಲ್ಲಿದ್ದು, 57 ಜನರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
 
ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿಂತಿರುವ ಫ್ರಾನ್ಸ್ ತಾನು ಐಸಿಸ್ ಉಗ್ರರನ್ನು ಸರ್ವಾನಾಶ ಮಾಡುವುದಾಗಿ ಶಪಥಗೈದಿದ್ದು ಐಸಿಸ್ ಉಗ್ರರ ನೆಲೆಗಳ ಮೇಲೆ ವಾಯುದಾಳಿಯನ್ನು ಪ್ರಾರಂಭಿಸಿದೆ. 

ವೆಬ್ದುನಿಯಾವನ್ನು ಓದಿ