ಶಾಪಿಂಗ್ ಮಾಲ್‌ ಮೇಲೆ ಕಾಣಿಸಿಕೊಂಡ ದೆವ್ವ

ಗುರುವಾರ, 9 ಮಾರ್ಚ್ 2017 (13:59 IST)
ಜಾಂಬಿಯಾದಲ್ಲೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಶಾಪಿಂಗ್ ಮಾಲೊಂದರ ಮೇಲೆ ಆಕಾಶದಲ್ಲಿ 10 ಮೀಟರ್ ಉದ್ದದ ನೆರಳೊಂದು ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಜನರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
 

ಜಾಂಬಿಯಾದ ಕಿಟ್ವೆ ಪ್ರದೇಶದ ಶಾಪಿಂಗ್ ‌ಮಾಲ್ ಬಳಿ ಈ ವಿಚಿತ್ರ ನಡೆದಿದ್ದು, ಅಚಾನಕ್ ಆಗಿ ಕಪ್ಪು ಬಣ್ಣದ ಸುಮಾರು 100ಮೀಟರ್ ಉದ್ದದ ನೆರಳು ಕಂಡುಬಂದಿದೆ. ಇದು ಭಾರಿ ಗಾತ್ರದ ಮನುಷ್ಯನನ್ನು ಹೋಲುತ್ತಿತ್ತು. ಅದನ್ನು ನೋಡಿದ ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡತೊಡಗಿದ್ದಾರೆ.
 
ಅದನ್ನು ನೋಡುತ್ತಿದದವರಿಗೆ ಶಾಪಿಂಗ್ ಸೆಂಟರ್ ಹತ್ತಿರ ಅದು ಬರುತ್ತಲಿದೆ ಎನ್ನಿಸುತ್ತಿತ್ತು. ಹೀಗಾಗಿ ಅಲ್ಲಿದ ಜನರಲ್ಲಿ ಭಯ ಇಮ್ಮಡಿಯಾಗಿ ಅಲ್ಲಿಂದವರು ಪಲಾಯನಗೈಯ್ಯತೊಡಗಿದರು.
 
 ಆಕಾಶದಲ್ಲಿ ಸುಮಾರು ಅರ್ಧ ಗಂಟೆಯಷ್ಟು ಕಾಲ ಇದು ಕಾಣುತಲೇ ಇತ್ತು. ಕೆಲವರು ಇದನ್ನು ದೆವ್ವವೆಂದು ಭಾವಿಸಿ ಓಡಿ ಹೋದರೆ ಮತ್ತೆ ಕೆಲವರು ಭಗವಂತನ ರೂಪವೆಂದು ಭಾವಿಸಿ ಪೂಜಿಸುತ್ತಿದ್ದುದು ಕಂಡುಬಂತು.

ವೆಬ್ದುನಿಯಾವನ್ನು ಓದಿ