ಸಾಕು ಪ್ರಾಣಿ ಇಲ್ಲದೇ ಶ್ವೇತಭವನ ಪ್ರವೇಶಿಸುವ ಮೊದಲ ಅಧ್ಯಕ್ಷರಾಗುತ್ತಾರಾ ಟ್ರಂಪ್?

ಬುಧವಾರ, 18 ಜನವರಿ 2017 (10:35 IST)
ಕಳೆದ 150 ವರ್ಷಗಳ ಇತಿಹಾಸದಲ್ಲಿ ಶ್ವೇತಭವನ ಪ್ರವೇಶಿಸಿರುವ ಅಮೇರಿಕದ ಅಧ್ಯಕ್ಷರೆಲ್ಲರ ಜತೆಯಲ್ಲೂ ಸಾಕು ಪ್ರಾಣಿಗಳಿದ್ದವು. ಆದರೆ ಈ ಬಾರಿ ಈ ಇತಿಹಾಸ ಮರೆಯಾಗುವ ಸಾಧ್ಯತೆಗಳಿವೆ. ಹೌದು, ಅಮೇರಿಕದ ಅಧ್ಯಕ್ಷರಾಗಿ ಇದೇ ತಿಂಗಳು ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಸಾಕುಪ್ರಾಣಿ ಇಲ್ಲದೇ ಶ್ವೇತಭವನ ಪ್ರವೇಶಿಸುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಜನವರಿ 20 ರಂದು ಅಧಿಕಾರ ಸ್ವೀಕರಿಸಲಿರುವ ಟ್ರಂಪ್ ಇದುವರೆಗೂ ಯಾವುದೇ ಸಾಕುಪ್ರಾಣಿಯನ್ನು ಹೊಂದಿಲ್ಲ. ಅವರ ಮನೆ ಸುತ್ತಮುತ್ತ ಯಾವುದೇ ಪ್ರಾಣಿಗಳನ್ನು ಇಟ್ಟುಕೊಳ್ಳಲಾಗಿಲ್ಲ. ಇಟ್ಟುಕೊಳ್ಳುವ ಯಾವುದೇ ಲಕ್ಷಣಗಳು ಸಹ ಕಾಣುತ್ತಿಲ್ಲ. ಹೀಗಾಗಿ ಸಾಕುಪ್ರಾಣಿ ಜತೆಗೆ ಶ್ವೇತಭವನ ಪ್ರವೇಶಿಸುವುದು ದೂರದ ಮಾತು. ಹೀಗಾಗಿದ್ದೇ ಆದಲ್ಲಿ 150 ವರ್ಷಗಳ ಇತಿಹಾಸ ಬದಲಾಗಲಿದೆ.
 
ಅಮೇರಿಕಾದ ಅಧ್ಯಕ್ಷ ಗಾದಿಗೇರುವವರೆಲ್ಲರೂ ಸಾಕು ಪ್ರಾಣಿ ಪ್ರೀತಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ, ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್, ಬಿಲ್ ಕ್ಲಿಂಟನ್ ನಾಯಿಯನ್ನು ಇಟ್ಟುಕೊಂಡಿದ್ದರು.  ಅಮೇರಿಕದ 27ನೇ ಅಧ್ಯಕ್ಷ ವಿಲಿಯಮ್ ಹಾರ್ವರ್ಡ್ ಹಸುವನ್ನು ಹೊಂದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ