ರಷ್ಯಾದಲ್ಲಿ ಮೋದಿ: ಪಾಕ್ ಪ್ರಧಾನಿ ಭೇಟಿ

ಬುಧವಾರ, 8 ಜುಲೈ 2015 (11:19 IST)
6 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ಮೋದಿ ಇಂದು ರಷ್ಯಾಕ್ಕೆ ತೆರಳಿದ್ದಾರೆ ಇಂದಿನಿಂದ ಮೂರು ದಿನಗಳ ಕಾಲ ಅವರು ರಷ್ಯಾದಲ್ಲಿರಲಿದ್ದಾರೆ. 
 
ಇಂದಿನಿಂದ ಮೂರು ದಿನಗಳ ಕಾಲ ರಷ್ಯಾದಲ್ಲಿ ಶಾಂಘೈ ಸಹಕಾರ ಸಂಘಟನೆಯ ಸಮಾವೇಶ (ಎಸ್‌ಸಿಒ) ನಡೆಯಲಿದೆ. ಚೀನಾ, ರಷ್ಯಾ, ಕಜಕಿಸ್ತಾನ, ಕಿರ್ಜಿಸ್ತಾನ, ಉಜ್ಬೆಕಿಸ್ತಾನ ಮತ್ತು ತಜಕಿಸ್ತಾನಗಳು ಎಸ್‌ಸಿಒದ ಸದಸ್ಯ ರಾಷ್ಟ್ರಗಳಾಗಿದ್ದು, ಈ  ಒಕ್ಕೂಟಕ್ಕೆ ಭಾರತವೂ ಸೇರ್ಪಡೆಗೊಳ್ಳಲಿದೆ. 
 
ರಷ್ಯಾದಲ್ಲಿ ಪ್ರಧಾನಿ ಬ್ರಿಕ್ಸ್ ಸಮಾವೇಶದಲ್ಲಿ ಸಹ ಪಾಲ್ಗೊಳ್ಳಲಿದ್ದಾರೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ಸೌತ್ ಆಫ್ರಿಕಾ ದೇಶಗಳನ್ನೊಳಗೊಂಡ ಬ್ರಿಕ್ಸ್ (ಬಿಆರ್‌ಐಸಿಎಸ್) ಸಮಾವೇಶ ದೇಶದ ಅಭಿವೃದ್ಧಿ, ಹೊರದೇಶಗಳೊಂದಿಗಿನ ಬಾಂಧವ್ಯಗ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. 
 
ರಷ್ಯಾದಲ್ಲಿ ಪ್ರಧಾನಿ ಪಾಕ್ ಪ್ರಧಾನಿ ನವಾಜ್ ಶರೀಫ್ ಜತೆ ಮಾತುಕತೆ ನಡೆಸುವ ಸಾಧ್ಯತೆಗಳಿದ್ದು, ಇದು ಬಹಳ ಕುತೂಹಲವನ್ನು ಸೃಷ್ಟಿಸಿದೆ. 

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರನ್ನು ಸಹ ಮೋದಿ ಭೇಟಿ ಮಾಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ