ಪಾಕ್‌ನಲ್ಲಿ ಉಲ್ಬಣಿಸಿದ ರಾಜಕೀಯ ಬಿಕ್ಕಟ್ಟು: ಷರೀಫ್ ರಾಜೀನಾಮೆಗೆ ಪಟ್ಟು

ಸೋಮವಾರ, 1 ಸೆಪ್ಟಂಬರ್ 2014 (12:15 IST)
ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದ್ದು, ಇಸ್ಲಾಮಾಬಾದ್‌ನಲ್ಲಿ  ಪ್ರಧಾನಿ ನವಾಜ್ ಷರೀಫ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ಮುಂದುವರಿದಿವೆ. ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಸಚಿವಾಲಯದ ಎದುರು ಕಾರ್ಯಕರ್ತರು ಜಮಾಯಿಸಿ ಸಚಿವಾಲಯದ ಗೇಟ್‌ಗಳನ್ನು ಮುರಿದು ಒಳನುಗ್ಗಲು ಯತ್ನಿಸಿದರು.

ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್ ಮತ್ತು ತಾಹಿಲ್ ಉಲ್ ಖಾದ್ರಿ ಸಾರಥ್ಯದ ಪಾಕಿಸ್ತಾನ ಅವಾಮಿ ತೆಹ್ರೀಕ್ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದು, ಸೇನಾ ಸಿಬ್ಬಂದಿ ಮೇಲೆ ಕಲ್ಲುಗಳನ್ನು ಪ್ರತಿಭಟನೆಕಾರರು ತೂರಿದರು. ಪೊಲೀಸರು ಇದಕ್ಕೆ ಪ್ರತಿಯಾಗಿ ರಬ್ಬರ್ ಗುಂಡು, ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

ನವಾಜ್ ಷರೀಫ್ ಚುನಾವಣೆಯಲ್ಲಿ ಅಕ್ರಮದಿಂದ ಜಯಗಳಿಸಿದ್ದಾರೆಂದು ಆರೋಪಿಸಲಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕೆಂದು ಪ್ರತಿಭಟನೆಕಾರರು ಪಟ್ಟು ಹಿಡಿದಿದ್ದಾರೆ.
 ಪೊಲೀಸರ ಜೊತೆ ಶನಿವಾರ ಪ್ರತಿಭಟನೆಯಲ್ಲಿ ಮೂವರು ಸತ್ತಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಚುನಾವಣೆ ಮೂಲಕ ನೇಮಕವಾದ ಶರೀಫ್ ರಾಜೀನಾಮೆ ನೀಡಲು ನಿರಾಕರಿಸಿದ್ದು, ಮಂಗಳವಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ