ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ಆಸೆ ಚಿಗುರಿಸಿದ ಮೋದಿ, ಷರೀಫ್ ಹ್ಯಾಂಡ್‌ಶೇಕ್

ಮಂಗಳವಾರ, 1 ಡಿಸೆಂಬರ್ 2015 (15:39 IST)
ಪ್ರಧಾನ  ಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನಡುವೆ ಸೋಮವಾರ ಸೌಹಾರ್ದ ಹಸ್ತಲಾಘವದಿಂದ ಉಪಖಂಡದ ನೆರೆಹೊರೆಯ ದೇಶಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಆಸೆಯನ್ನು ಚಿಗುರಿಸಿದೆ. ಹವಾಮಾನ ವೈಪರೀತ್ಯ ಶೃಂಗಸಭೆಗೆ ಸಂದರ್ಭದಲ್ಲಿ ಪ್ಯಾರಿಸ್‌ನಲ್ಲಿ ಮೋದಿ ಮತ್ತು ಷರೀಫ್ ಭೇಟಿ ಯಲ್ಲಿ  ಹಸ್ತಲಾಘವ ಮಾಡಿದ್ದು  ಕ್ರಿಕೆಟ್ ಸರಣಿ ಪುನಾರಂಭದ ಆಸೆಯನ್ನು ಹುಟ್ಟುಹಾಕಿದೆ.  ನೆರೆಹೊರೆಯ ದೇಶಗಳ ನಡುವೆ ಸೌಹಾರ್ದ ಸಂಬಂಧ ಬೆಳೆಯಲು ಕ್ರಿಕೆಟ್ ಒಂದು ಮಾಧ್ಯಮ ಎಂದು ವಿಶ್ಲೇಷಕರು ಭಾವಿಸಿದ್ದಾರೆ. 
 
 ಕ್ರಿಕೆಟ್ ಪ್ರೇಮಿ ಷರೀಫ್ ಕಳೆದ ವಾರ ಕಿರು ದ್ವಿಪಕ್ಷೀಯ ಸರಣಿಯನ್ನು ಶ್ರೀಲಂಕಾದಲ್ಲಿ ಆಡಲು ಹಸಿರುನಿಶಾನೆ ತೋರಿದ್ದಾರೆ. ಆದರೆ ಬಿಸಿಸಿಐ ಮನವಿಯನ್ನು ಭಾರತ ಸರ್ಕಾರ ಶೀತಲಾಗಾರದಲ್ಲಿರಿಸಿದೆ. 
 
 ಶಿವಸೇನೆ ಸೇರಿದಂತೆ ವಿವಿಧ ಭಾಗಗಳಿಂದ ರಾಜಕೀಯ ಒತ್ತಡದ ಕಾರಣದಿಂದಾಗಿ ಬಿಸಿಸಿಐಗೆ ಹಸಿರು ನಿಶಾನೆ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. 
 ಈ ನಡುವೆ ಪಾಕಿಸ್ತಾನ ಮಾಜಿ ನಾಯಕ ಜಾವೇದ್ ಮಿಯಂದಾದ್ ಬಿಸಿಸಿಐ ಜತೆ ವ್ಯವಹರಿಸುವಾಗ ಪಿಸಿಬಿ ಎಚ್ಚರವಾಗಿರಬೇಕೆಂದು ನಂಬಿದ್ದಾರೆ.

ಭಾರತದ ಸರಣಿಯಿಂದ ಆರ್ಥಿಕ ಲಾಭವಾಗುತ್ತೆಂಬ ಆಸೆ ಇಟ್ಟುಕೊಳ್ಳಬೇಡಿ. ಭಾರತದ ಮಂಡಳಿ ಸದಾ ತನ್ನ ನಿಲುವನ್ನು ಬದಲಿಸುತ್ತಿದ್ದು, ಒಡಂಬಿಕೆ ನಡುವೆಯೂ ನಮ್ಮ ಜತೆ ಆಡದಿರುವುದಕ್ಕೆ ಸಬೂಬುಗಳನ್ನು ಹುಡುಕುತ್ತಿರುವಂತೆ ಕಾಣುತ್ತಿದೆ. ಶ್ರೀಲಂಕಾದಲ್ಲಿ ಕೂಡ ನಮ್ಮ ಜತೆ ಆಡುವುದರಿಂದ ತಪ್ಪಿಸಿಕೊಂಡರೆ ಆಶ್ಚರ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ