ಸಿರಿಯಾ ಪರಿಹಾರಕ್ಕೆ ಸೌದಿ ರಾಜಕುಮಾರನನ್ನು ಭೇಟಿ ಮಾಡಿದ ಪುಟನ್

ಸೋಮವಾರ, 12 ಅಕ್ಟೋಬರ್ 2015 (14:31 IST)
ಸಿರಿಯಾದಲ್ಲಿ ರಾಜಕೀಯ ಸಮಸ್ಯೆ ಪರಿಹಾರದ ಸಾಧ್ಯತೆ ಕುರಿತು ಚರ್ಚಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೌದಿ ರಕ್ಷಣಾ ಸಚಿವ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಸೋಮವಾರ ಭೇಟಿ ಮಾಡಿದರು. ಉಭಯತ್ರರು ದಕ್ಷಿಣ ರಷ್ಯಾ ನಗರ ಸೊಚಿಯಲ್ಲಿ ಭೇಟಿ ಮಾಡಿ ವಿದೇಶಾಂಗ ಸಚಿವ ಸರ್ಗೈ ಲಾರ್ವೋವ್ ಮತ್ತು ಇಂಧನ ಸಚಿವ ಅಲೆಕ್ಸಾಂಡರ್ ನೋವಾಕ್ ಅವರನ್ನು ಜತೆಗೂಡಿದ್ದರು.
 
ಸೌದಿ ಮತ್ತು ರಷ್ಯಾ ಸಿರಿಯಾಗೆ ಸಂಬಂಧಿಸಿದಂತೆ ಒಂದೇ ಉದ್ದೇಶ ಹೊಂದಿರುವುದಾಗಿ ಉಭಯತ್ರರು ದೃಢಪಡಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶವನ್ನು ಭಯೋತ್ಪಾದಕ ಕಲೀಫೇಟ್ ಆಕ್ರಮಿಸಿಕೊಳ್ಳಲು ಬಿಡಬಾರದೆಂದು ತೀರ್ಮಾನಿಸಿವೆ.
 
ರಷ್ಯಾ ಸಿರಿಯಾದಲ್ಲಿ ಮಿಲಿಟರಿ ಹಸ್ತಕ್ಷೇಪ ನಡೆಸಿರುವ ಬಗ್ಗೆ ಮತ್ತು ಇರಾನ್‌ ಜತೆ ಮೈತ್ರಿ ಕುರಿತು ರಿಯಾದ್ ಚಿಂತಿತವಾಗಿದೆ ಎಂದು ಮಹಮ್ಮದ್ ಬಿನ್ ಸಲ್ಮಾನ್ ತಿಳಿಸಿದರು. ಸಿರಿಯಾದಲ್ಲಿ ರಾಜಕೀಯ ಪರಿಹಾರಕ್ಕೆ ಸೌದಿ ಅರೇಬಿಯಾ ಒಲವು ತೋರಿಸಿದೆ. ಆದರೆ ಮಾಸ್ಕೊ ಜತೆ ಕಟ್ಟಾ ಮೈತ್ರಿ ಹೊಂದಿರುವ ಅಧ್ಯಕ್ಷ ಬಷರ್ ಅಲ್ ಅಸಾದ್ ನಿರ್ಗಮನ ಕೂಡ ಅದರಲ್ಲಿ ಸೇರಿದೆ. 
 
 ಏತನ್ಮಧ್ಯೆ ಸಿರಿಯಾದ ಮೇಲೆ ಬಾಂಬ್ ದಾಳಿ ಅಭಿಯಾನಕ್ಕೆ ಮಾಸ್ಕೊ ಕಾರ್ಯಪ್ರವೃತ್ತವಾಗಿರುವುದು ಅಮೆರಿಕ ನೇತೃತ್ವದ ಸಮ್ಮಿಶ್ರ ಕೂಟವನ್ನು ಮಬ್ಬಾಗಿಸಿದ್ದು, ಅಮೆರಿಕ ಮತ್ತು ಮಿತ್ರಕೂಟಕ್ಕೆ ಕೋಪ ತರಿಸಿದೆ. ರಷ್ಯಾದ ಕಾರ್ಯಾಚರಣೆ ಉದ್ದೇಶವು ಕಾನೂನುಬದ್ಧ ಅಧಿಕಾರ ಸ್ಥಿರಗೊಳಿಸಿ ರಾಜಕೀಯ ಪರಿಹಾರಕ್ಕೆ ಪರಿಸ್ಥಿತಿ ಸೃಷ್ಟಿಸುವುದು ಎಂದು ಪುಟಿನ್ ಈ ಸಂದರ್ಭದಲ್ಲಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ