ವಿಡಿಯೋ: ಹೆಬ್ಬಾವು ಬಾವಲಿಯ ಕಾಳಗ ನೋಡಿ ದಂಗಾದ ಪ್ರವಾಸಿಗರು!

ಗುರುವಾರ, 22 ಡಿಸೆಂಬರ್ 2016 (11:28 IST)
ಹೆಬ್ಬಾವುಗಳು ನಾಯಿ, ಜಿಂಕೆ, ಮೊಲದಂತಹ ಪ್ರಾಣಿಗಳನ್ನು ತಿನ್ನುವುದನ್ನು ನೋಡಿರುತ್ತೀರ. ಈ ದೈತ್ಯ ಹಾವಿನಿಂದ ತಪ್ಪಿಸಿಕೊಳ್ಳಲು ಪ್ರಾಣಿಗಳು ವಿಫಲ ಪ್ರಯತ್ನ ನಡೆಸಿರುವುದನ್ನು  ನೋಡಿ ಮರುಗಿರುತ್ತೀರ. ಆದರೆ ಬಾವಲಿಯೊಂದು ಹೆಬ್ಬಾವಿನ ಜತೆ ಸೆಣಸಾಡುವುದನ್ನು ಎಂದಾದರೂ ಕಂಡಿದ್ದೀರಾ? 

 
ಇಂತಹ ಅಪರೂಪದ ಘಟನೆಯೊಂದು ಥೈಲ್ಯಾಂಡ್‌ನ ಸಿಮಿನಲ್ ದ್ವೀಪದ ಸಮುದ್ರತೀರದಲ್ಲಿ ನಡೆದಿದೆ. ದೈತ್ಯ ಹೆಬ್ಬಾವೊಂದು ಬಾವಲಿಯನ್ನು ಹಿಡಿದು ನುಂಗಲು ಯತ್ನಿಸಿದೆ. ಆದರೆ ಛಲ ಬಿಡದ ಬಾವಲಿ ಹಾವಿನ ಹಿಡಿತದಿಂದ ಪಾರಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ತೆವಳುತ್ತಾ ಅಲ್ಲಿಂದ ತೆರಳಿದೆ. 
 
ಇದೀಗ  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 

 ಹೆಬ್ಬಾವು ಬಾವಲಿ ಕಾಳಗ 

ವೆಬ್ದುನಿಯಾವನ್ನು ಓದಿ