30 ವರ್ಷಗಳ ಶಿಕ್ಷೆಯಿಂದ ಬಿಡುಗಡೆ: ತಾಯಿಯನ್ನು ಕೊಂದು ಮತ್ತೆ ಜೈಲುಪಾಲಾದ

ಶನಿವಾರ, 20 ಫೆಬ್ರವರಿ 2016 (16:04 IST)
ನ್ಯೂಜರ್ಸಿಯ ವ್ಯಕ್ತಿಯೊಬ್ಬ ಕೊಲೆ ಆರೋಪದ ಮೇಲೆ 30 ವರ್ಷಗಳ ಶಿಕ್ಷೆಗೆ ಗುರಿಯಾಗಿ ಬಿಡುಗಡೆಯಾಗಿದ್ದ. ಪುತ್ರ ಹೊಸ ಜೀವನಕ್ಕೆ ಕಾಲಿಟ್ಟ ಸಂತಸದಲ್ಲಿ ಅವನ ತಾಯಿ ವೆಲ್ ಕಮ್ ಹೋಮ್ ಪಾರ್ಟಿ ಆಯೋಜಿಸಿದ್ದರು. ಆದರೆ   ಸ್ಟೀವನ್ ಪ್ರಾಟ್ ಜೈಲಿನಿಂದ ಹೊರಬಂದ ಎರಡು ದಿನಗಳಲ್ಲಿ ತನ್ನ ತಾಯಿಯನ್ನೇ ಕೊಂದು ಮತ್ತೆ 25 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ.

64 ವರ್ಷ ವಯಸ್ಸಿನ ತಾಯಿ ಗ್ವೆಂಡೋಲಿನ್ ಪ್ರಾಟ್‌ ಅಟ್ಲಾಂಟಿಕ್ ಸಿಟಿ ನಿವಾಸದಲ್ಲಿ ಶವವಾಗಿ ಬಿದ್ದಿದ್ದರು. ತಾಯಿಯನ್ನು ತಾನೇ ಕೊಂದಿದ್ದಾಗಿ ಸ್ವೀವನ್ ಒಪ್ಪಿಕೊಂಡ. ತಾಯಿಯ ತಲೆಗೆ ಬಲವಾದ ಪೆಟ್ಟು ಹೊಡೆದು ಗಾಯಗೊಳಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
 
ಪ್ರಾಟ್  2 ದಿನಗಳ ಕೆಳಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಪ್ರಾಟ್ ತನ್ನ 15 ರ ಪ್ರಾಯದಲ್ಲಿ ಪಕ್ಕದ ಮನೆಯ ಮೈಕೇಲ್ ಆಂಡರ್‌ಸನ್ ಅವರನ್ನು ಕೊಂದು, 30 ವರ್ಷಗಳ ಸುದೀರ್ಘ ಶಿಕ್ಷೆಗೆ ಗುರಿಯಾಗಿದ್ದ. ಪ್ರಾಟ್ ಮತ್ತು ಕೆಲವು ಸ್ನೇಹಿತರು ಅಪಾರ್ಟ್‌ಮೆಂಟ್ ಹಾಲ್ ವೇ ತ್ಯಜಿಸಲು ನಿರಾಕರಿಸಿದಾಗ ಆಂಡರ್‌ಸನ್ ಅವರ ಜತೆ ವಾದಕ್ಕೆ ಇಳಿದಿದ್ದರು.
 
ಆಂಡರ್‌ಸನ್‌ಗೆ ಲೆಡ್ ಪೈಪ್‌ನಿಂದ ಹಲ್ಲೆಗೆ ಯತ್ನಿಸಿದಾಗ ಆಂಡರ್‌ಸನ್ ಪೈಪ್ ಕಸಿದುಕೊಂಡು ಪ್ರಾಟ್ ತುಟಿಗೆ ಗಾಯಮಾಡಿದ್ದರು. ಸಿಟ್ಟಾದ ಬಾಲಕ ತನ್ನ ನೆರೆಯ ಅಪಾರ್ಟ್‌ಮೆಂಟ್‌ಗೆ ತೆರಳಿ ಪಿಸ್ತೂಲಿನಿಂದ ವ್ಯಕ್ತಿಯ ಮುಖಕ್ಕೆ ಗುಂಡುಹಾರಿಸಿ ಕೊಂದುಹಾಕಿದ್ದ. 
 

ವೆಬ್ದುನಿಯಾವನ್ನು ಓದಿ