ಪಾಕ್ ಮಾಜಿ ಪ್ರಧಾನಿಯ ಪುತ್ರ ಉಗ್ರರ ಮುಷ್ಠಿಯಿಂದ ರಕ್ಷಣೆ

ಬುಧವಾರ, 11 ಮೇ 2016 (22:05 IST)
ಟಿ ಷರ್ಟ್‌ ಮತ್ತು ಉದ್ದದ ಗಡ್ಡದೊಂದಿಗೆ  ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿಯ ಪುತ್ರ ತೀವ್ರ ಆಯಾಸಗೊಂಡವನಂತೆ ಕಂಡುಬಂದರು. ಅಮೆರಿಕ ಮತ್ತು ಆಫ್ಘನ್ ಕಮಾಂಡೊಗಳು ಅಲ್ ಖಾಯಿದಾ ಉಗ್ರರ ಸೆರೆಯಿಂದ ರಕ್ಷಿಸಿದ ಆಲಿ ಹೈದರ್ ಜಿಲಾನಿ ಮೂರು ವರ್ಷಗಳ ಸೆರೆಯ ಬಳಿಕ ತವರಿಗೆ ಮರಳಿದ್ದಾರೆ. 
 
ಆಲಿ ಹೈದರ್ ಜಿಲಾನಿ ಪತ್ರಿಕಾಗೋಷ್ಠಿಯಲ್ಲಿ ರಕ್ಷಕರಿಗೆ ಧನ್ಯವಾದ ಹೇಳುವ ಮೂಲಕ ಎರಡು ರಾಷ್ಟ್ರಗಳ ನಡುವಿನ ವಿವಾದದ ನಡುವೆ ಸ್ನೇಹದ ಹೊಸ ಮನೋಭಾವವನ್ನು ತೋರಿಸಿದರು.

ಉಭಯ ರಾಷ್ಟ್ರಗಳ ನಡುವೆ ಹಂಚಿಕೆಯಾದ ಗಡಿಯಲ್ಲಿ ಭಯೋತ್ಪಾದಕರನ್ನು ನಿಭಾಯಿಸುವ ರೀತಿಯ ಬಗ್ಗೆ ಸುದೀರ್ಘ ವಿವಾದ ಉಂಟಾಗಿತ್ತು. 
ಅಲ್ ಖಾಯಿದಾ ಪಾಕಿಸ್ತಾನ ಗಡಿಯಲ್ಲಿ ಸೆಲ್ ಸ್ಥಾಪಿಸುತ್ತಿದೆಯೆಂಬ ಸುಳಿವು ಅಮೆರಿಕ ಮತ್ತು ಆಫ್ಘನ್ ಅಧಿಕಾರಿಗಳಿಗೆ ಸಿಕ್ಕಿದ ಬಳಿಕ ಈ ವಾರ ದಾಳಿಯ ಯೋಜನೆ ರೂಪಿಸಿತ್ತು. ಈ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಹತರಾದರು.
 
ನಾವು ಜಿಲಾನಿಯನ್ನು ಉಗ್ರರ ಮುಷ್ಠಿಯಿಂದ ತಪ್ಪಿಸಲು ಯಶಸ್ವಿಯಾಗಿದ್ದು, ಅಧಿಕೃತವಾಗಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದ್ದೇವೆ. ನಮ್ಮ ಕರ್ತವ್ಯವನ್ನು ಪೂರೈಸಿದ್ದಕ್ಕೆ ನಮಗೆ ಸಂತೋಷವಾಗಿದೆ ಎಂದು ಆಫ್ಘನ್ ಸೇನಾ ಮುಖ್ಯಸ್ಥ ಶಾಹಿಮ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ