ಪಿಜ್ಜಾ ತಿನ್ನಲು ಹೋಗಿ ಒಂದು ಕೋಟಿ ರೂಪಾಯಿ ಕಳೆದುಕೊಂಡ

ಸೋಮವಾರ, 28 ಜುಲೈ 2014 (19:02 IST)
ಪಿಜ್ಜಾ ತಿನ್ನವ ಬಯಕೆ ವ್ಯಕ್ತಿಯೊಬ್ಬನಿಗೆ ಜೀವನ ಪರ್ಯಂತ ನೆನಪಿರುವಂತಹ ಪಾಠ ಕಲಿಸಿದೆ. ಒಂದು ಸಂಜೆ ಪಿಜ್ಜಾ ತಿನ್ನುವ ಆಸೆಯಿಂದ ಆರ್ಡರ್ ಮಾಡಿದ ಗ್ರಾಹಕನೊಬ್ಬ ಪಿಜ್ಜಾ ದರವನ್ನು ಗಮನಿಸದೆ ಪಿಜ್ಜಾ ಬಂದ ಕೂಡಲೇ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಯನ್ನೂ ಮಾಡಿದ.   
 
ಮಾರನೇ ದಿವಸ ಗ್ರಾಹಕ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸಿ ಹಣ ಪಾವತಿಗಾಗಿ ಕ್ರೆಡಿಟ್ ಕಾರ್ಡ್ ನೀಡಿದಾಗ ಆಘಾತ ಕಾದಿತ್ತು. ಈತನ ಕಾರ್ಡ್‌‌ನಲ್ಲಿ ಬ್ಯಾಲೆನ್ಸ್‌ ಖಾಲಿಯಾಗಿತ್ತು. ಇದನ್ನು ಕಂಡು ಈತ ಕುಸಿದು ಬಿದ್ದ. ಏಕೆಂದರೆ ಈತನ ಕ್ರೆಡಿಟ್‌ ಕಾರ್ಡ್‌‌‌‌ನಲ್ಲಿ 1.80 ಲಕ್ಷ ಡಾಲರ್‌ವರೆಗೆ (ಸುಮಾರು ಒಂದು ಕೋಟಿ ರೂಪಾಯಿ).ಮಿತಿಯಿತ್ತು.‌ ಆಘಾತಗೊಂಡ ಗ್ರಾಹಕ ಕೂಡಲೇ ಬ್ಯಾಂಕ್‌‌‌ಗೆ ಫೋನ್‌ ಮಾಡಿದ. ಆಗ ಪಿಜ್ಜಾಗೆ 18 ಡಾಲರ್‌ ಪಾವತಿಸುವ ಬದಲಿಗೆ ( ಒಂದು ಸಾವಿರ ರೂಪಾಯಿಗಳ ಬದಲಿಗೆ) 1.80 ಲಕ್ಷ ಡಾಲರ್‌‌ ಪಾವತಿಸಿದ್ದನು. 
 
ಗ್ರಾಹಕನ ಕ್ರೆಡಿಟ್ ಕಾರ್ಡ್ ಅಕೌಂಟ್ ಶೂನ್ಯ ರೂಪಾಯಿಗಳಿಗೆ ತಲುಪಿದೆ. ಇದೀಗ ಗ್ರಾಹಕ ದೂರು ದಾಖಲಿಸಿದ ಎರಡು ದಿನಗಳ ನಂತರ ಈತನ ಕಾರ್ಡ್‌ಗೆ ಹಣ ಮರಳಿ ಬಂದಿವೆ.

ವೆಬ್ದುನಿಯಾವನ್ನು ಓದಿ