ರಷ್ಯಾ ದಾಳಿಗೆ ತತ್ತರಿಸಿದ ಐಸಿಸ್ ಉಗ್ರರು

ಶನಿವಾರ, 10 ಅಕ್ಟೋಬರ್ 2015 (10:49 IST)
ಅಮಾಯಕರನ್ನು ಅಪಹರಿಸಿ ಅತ್ಯಂತ ಕ್ರೂರವಾಗಿ ಕೊಲ್ಲುತ್ತ ವಿಶ್ವದಾದ್ಯಂತ ಭಯವನ್ನು ಹುಟ್ಟಿ ಹಾಕಿರುವ ಐಸಿಸ್ ಉಗ್ರರೇ ಈಗ ಭಯಕ್ಕೆ ಒಳಗಾಗಿದ್ದಾರೆ. ಐಸಿಸ್ ಉಗ್ರರ ಸರ್ವನಾಶಕ್ಕೆ ಪಣ ತೊಟ್ಟಿರುವ ರಷ್ಯಾ ಅವರ ವಿರುದ್ಧ ಯುದ್ಧದಲ್ಲಿ ತೊಡಗಿಕೊಂಡಿದ್ದು, ಉಗ್ರರ ಪಾಲಿಗೆ ಸಾವಾಗಿ ಕಾಡುತ್ತಿದೆ. 

10 ದಿನಗಳಿಂದ ಐಸಿಸ್ ಉಗ್ರ ವಿರುದ್ಧ ಸಮರ ಸಾರಿರುವ ರಷ್ಯಾ ಮೊನ್ನೆ ಮತ್ತು ನಿನ್ನೆ 24 ಗಂಟೆಗಳಲ್ಲಿ ಒಂದೇ ದಿನ ಸಿರಿಯಾದ 60 ಅಗಡುತಾಣಗಳಲ್ಲಿ ವೈಮಾನಿಕ ದಾಳಿ ನಡೆಸಿ ಬರೊಬ್ಬರಿ 300 ಐಸಿಸ್ ಉಗ್ರರನ್ನು ಹೊಡೆದುರುಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
 
ಕಳೆದ 1 ವರ್ಷದಿಂದ ಅಮೇರಿಕ ಮತ್ತು ಬ್ರಿಟನ್ ಪಡೆಗಳು ಐಸಿಸ್ ವಿರುದ್ಧ ಹೋರಾಟಕ್ಕಿಳಿದಿದ್ದರೂ ಯಾವುದೇ ಸಫಲತೆಯನ್ನು ಕಂಡುಕೊಂಡಿರಲಿಲ್ಲ. ಈಗ ರಷ್ಯಾ ಸಹ ದುಷ್ಟ ಭಯೋತ್ಪಾದಕರ ವಿರುದ್ಧದ ಜಾಗತಿಕ ಹೋರಾಟಕ್ಕೆ ಹೊಸ ತಿರುವು ಸಿಕ್ಕಿದೆ.
 
ಅಮೇರಿಕದ ಪ್ರಬಲ ಶತ್ರು ತಾನು ಐಸಿಸ್ ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಿಯೇ ಮರಳುತ್ತೇವೆ ಎಂದು ಘೋಷಿಸಿ ಸಿರಿಯಾಕ್ಕೆ ಕಾಲಿಟ್ಟಿದ್ದು ಆರಂಭದಲ್ಲೇ ದೊಡ್ಡ ಮಟ್ಟದ ಯಶವನ್ನು ಕಂಡಿದೆ.

ವೆಬ್ದುನಿಯಾವನ್ನು ಓದಿ