ಸೇತುವೆ ಕುಸಿದು ಕಾಲುವೆಗೆ ಉರುಳಿದ ರೈಲು: 6 ಜನರು ನೀರುಪಾಲು

ಗುರುವಾರ, 2 ಜುಲೈ 2015 (19:49 IST)
ನೂರಾರು ಪಾಕಿಸ್ತಾನಿ ಸೈನಿಕರು ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ರೈಲು ಸೇತುವೆ ಕುಸಿದುಬಿದ್ದಿದ್ದರಿಂದ ಅನೇಕ ಅಡಿ ಆಳದ ಕಾಲುವೆಗೆ ಬಿದ್ದು ಸುಮಾರು 6 ಜನರು ನೀರುಪಾಲಾಗಿದ್ದಾರೆ.  ಸೇನೆ ಇದನ್ನು ವಿಧ್ವಂಸಕಾರಿ ಕೃತ್ಯವೆಂದು ಶಂಕಿಸಿದೆ. ರೈಲ್ವೆ ಸಚಿವಾಲಯದ ಮತ್ತು ಮಿಲಿಟರಿಯ ಅಧಿಕಾರಿಗಳು ಯಾವುದೇ ಸಾವಿನ ಬಗ್ಗೆ ದೃಢಪಡಿಸಿಲ್ಲ. ನಾಲ್ಕು ಬೋಗಿಗಳು ಕಾಲುವೆಯಲ್ಲಿ ಮುಳುಗಿರುವುದಾಗಿ ಸೇನೆಯ ವಕ್ತಾರ ಖಚಿತಪಡಿಸಿದರು.
 
ಮಿಲಿಟರಿಯು ಆಫ್ಘನ್ ಗಡಿಯ ವಾಯವ್ಯ ಬುಡಕಟ್ಟು ಪ್ರದೇಶಗಳಲ್ಲಿ  ತಾಲಿಬಾನ್ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿದೆ. ಸೇನೆಯ ಘಟಕವನ್ನು ದಕ್ಷಿಣ ಸಿಂಧ್ ಪ್ರಾಂತ್ಯದಿಂದ ಉತ್ತರ ಪಾಕಿಸ್ತಾನಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಗುಜ್ರನ್‌ವಾಲಾ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

 ರೈಲಿನಲ್ಲಿ ಸುಮಾರು 300 ಪ್ರಯಾಣಿಕರಿದ್ದು, ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ರೈಲ್ವೆ ಸಚಿವ ಕ್ವಾಜಾ ಸಾದ್ ರಫೀಕ್ ಹೇಳಿದ್ದಾರೆ. ಟೆಲಿವಿಷನ್ ಚಿತ್ರಗಳಲ್ಲಿ ಅನೇಕ ಬೋಗಿಗಳು ಕಾಲುವೆಯಲ್ಲಿ ಮುಳುಗಿರುವುದನ್ನು ತೋರಿಸಿದೆ. 

ವೆಬ್ದುನಿಯಾವನ್ನು ಓದಿ