ಸೌದಿ ಅರೇಬಿಯಾ ದೊರೆ ಅಬ್ದುಲ್ಲಾ ನಿಧನ

ಶುಕ್ರವಾರ, 23 ಜನವರಿ 2015 (11:15 IST)
ಸೌದಿ ಅರೆಬೀಯಾದ ದೊರೆ ಅಬ್ದುಲ್ಲಾ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. 
ಪ್ರಿನ್ಸ್ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರನ್ನು ಹೊಸ ರಾಜನನ್ನಾಗಿ ನೇಮಿಸಲಾಗುವುದು ಎಂದು ಸೌಧಿಯ ದೂರದರ್ಶನ ವರದಿ ಮಾಡಿದೆ.
 
ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ. 
 
ರಿಯಾದ್‌ನಲ್ಲಿರುವ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಗ್ರ್ಯಾಂಡ್ ಮಸೀದಿಯಲ್ಲಿ ಶುಕ್ರವಾರ ಮಧ್ಯಾಹ್ನ ಅವರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಅನೇಕ ವಿಶ್ವದ ಅನೇಕ ನಾಯಕರು ಭಾಗವಹಿಸುವ ಸಾಧ್ಯತೆಗಳಿವೆ.
 
ಜಗತ್ತಿನ ಅತೀ ಶ್ರೀಮಂತ ರಾಜ ಎಂಬ ಹೆಗ್ಗಳಿಗೆ ಹೊಂದಿದ್ದ ಅಬ್ದುಲ್ಲಾ ಅವರನ್ನು 'ಸುಧಾರಕ ರಾಜ' ಎಂದೇ ಕರೆಯಲಾಗುತ್ತಿತ್ತು. ಸೌಧಿ ಅರೇಬಿಯಾದ ಅಭಿವೃದ್ಧಿಯಲ್ಲಿ ಅವರ ಪಾತ್ರ ಹಿರಿದಾದುದು. 

ವೆಬ್ದುನಿಯಾವನ್ನು ಓದಿ