10 ವರ್ಷಗಳಲ್ಲಿ ಪಾಕಿಸ್ತಾನ ವಿಶ್ವದ ಮೂರನೇ ಅತೀ ದೊಡ್ಡ ಅಣ್ವಸ್ತ್ರ ಶಕ್ತಿ

ಶುಕ್ರವಾರ, 28 ಆಗಸ್ಟ್ 2015 (20:09 IST)
ಪಾಕಿಸ್ತಾನ ಇನ್ನು 10 ವರ್ಷಗಳಲ್ಲಿ ವಿಶ್ವದ ಅತೀ ದೊಡ್ಡ ಅಣ್ವಸ್ತ್ರಗಳ ದಾಸ್ತಾನು ಹೊಂದಿರುವ ರಾಷ್ಟ್ರವಾಗಬಹುದು. ಪ್ರಸಕ್ತ ಇದು ಭಾರತಕ್ಕಿಂತ ಮುಂದಿದ್ದು, ಅಮೆರಿಕ, ರಷ್ಯಾ, ಫ್ರಾನ್ಸ್ , ಯುಕೆ ಮತ್ತು ಚೀನಾಗಿಂತ ಹಿಂದಿದೆ ಎಂದು ಇತ್ತೀಚಿನ ಬಹು ಅಂದಾಜುಗಳಲ್ಲಿ ತಿಳಿಸಿದೆ.
 
 ಪಾಕಿಸ್ತಾನ 10 ವರ್ಷಗಳಲ್ಲಿ 350 ಅಣ್ವಸ್ತ್ರಗಳನ್ನು ಹೊಂದಬಹುದು ಅಥವಾ ಲಭ್ಯವಿರುವ  ವಿದಳನ ವಸ್ತುಗಳ ಮೂಲಕ ಅವುಗಳನ್ನು ತಯಾರಿಸಬಹುದು ಎಂದು ಕಾರ್ನೇಜಿ ಮತ್ತು ಸ್ಟಿಮ್‌ಸನ್ ಕೇಂದ್ರ ಬಿಡುಗಡೆ ಮಾಡಿದ ವರದಿ ತಿಳಿಸಿದೆ. 
 
 ಇದು ಸಂಭವಿಸಿದರೆ ಪಾಕಿಸ್ತಾನವು ಫ್ರಾನ್ಸ್, ಚೀನಾ ಮತ್ತು ಯುಕೆ ಕ್ರಮವಾಗಿ ಹೊಂದಿರುವ 300, 250 ಮತ್ತು 225 ಅಣ್ವಸ್ತ್ರಗಳಿಗಿಂತ ಹೆಚ್ಚು ಅಣ್ವಸ್ತ್ರಗಳನ್ನು ಹೊಂದಲಿದೆ.ಅಮೆರಿಕ ಮತ್ತು ರಷ್ಯಾ ಮುನ್ನಡೆಯಲ್ಲಿದ್ದು ಅಂದಾಜು ತಲಾ 1600 ಅಣ್ವಸ್ತ್ರಗಳನ್ನು ಹೊಂದಿವೆ. 
 
 ಪಾಕಿಸ್ತಾನ ಪ್ರಸಕ್ತ 120 ಅಣ್ವಸ್ತ್ರಗಳನ್ನು ಹೊಂದಿದ್ದರೆ ಭಾರತ 100 ಮತ್ತು ಇಸ್ರೇಲ್ 80 ಅಣ್ವಸ್ತ್ರಗಳನ್ನು ಹೊಂದಿವೆ.  ಪಾಕಿಸ್ತಾನ ಪ್ರತಿವರ್ಷ 20 ಪರಮಾಣು ಸಿಡಿತಲೆಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದೆ. ಭಾರತಕ್ಕೆ ಹೆದರಿಕೊಂಡು ಪಾಕಿಸ್ತಾನ ಅಣ್ವಸ್ತ್ರಗಳ ದಾಸ್ತಾನು ಮಾಡಲು ಯೋಜಿಸುತ್ತಿದೆ. 
 

ವೆಬ್ದುನಿಯಾವನ್ನು ಓದಿ