ಹೊಟೆಲ್‌ನಲ್ಲಿ ಅಗ್ನಿ ಆಕಸ್ಮಿಕ: 10 ಸಾವು

ಶನಿವಾರ, 25 ಫೆಬ್ರವರಿ 2017 (16:17 IST)
ಚೀನಾದ  ಐಷಾರಾಮಿ ಹೊಟೆಲೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.ನ್ ಚಂಗ್ ಜಿಲ್ಲೆಯ ಜಿಯಾಂಕ್ಸಿ ಪ್ರಾಂತ್ಯದಲ್ಲಿರುವ ಹೆಎಚ್ ಎನ್ ಪ್ಲಾಟಿನಂ ಮಿಕ್ಸ್ ಹೊಟೆಲ್‌ನಎರಡನೇ ಮಹಡಿಯಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದ್ದು ಅಗ್ನಿಶಾಮಕ ವಾಹನಗಳು ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿವೆ.
 
ಅಪಾಯದಿಂದ ಪಾರಾಗಲು ವ್ಯಕ್ತಿಯೊಬ್ಬ ಕೆಳಕ್ಕೆ ಜಿಗಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
 
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಕಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
 
ನಾಲ್ಕು ಮಹಡಿಯ ಹೊಟೆಲ್ ಇದಾಗಿದ್ದು 24 ಅಂತಸ್ತಿನ ಅಪಾರ್ಟಮೆಂಟ್‌ಗೆ ಹೊಂದಿಕೊಂಡಂತೆ ಇದೆ.

ವೆಬ್ದುನಿಯಾವನ್ನು ಓದಿ