ಕಾರಿನಲ್ಲಿ ಚಕ್ಕಂದ: ಗೆಳತಿ ಸಾವು, ಭಾರತೀಯನಿಗೆ 7 ವರ್ಷ ಶಿಕ್ಷೆ

ಶನಿವಾರ, 29 ಆಗಸ್ಟ್ 2015 (20:03 IST)
ಲಂಡನ್: ಕಂಠ ಪೂರ್ತಿ ಕುಡಿದು ಕಾರು ಚಲಾಯಿಸಿದ್ದಲ್ಲದೇ ಗೆಳತಿಯ ಲೈಂಗಿಕ ಬಯಕೆಗೆ ಸಹಕರಿಸಿದ್ದರಿಂದ ಕಾರು ಭೀಕರ ಅಪಘಾತಗೊಂಡು ಗೆಳತಿ ಸಾವನ್ನಪ್ಪಿದ ಪ್ರಕರಣದಲ್ಲಿ ಲಂಡನ್ ಕೋರ್ಟ್ ಮಿನೇಶ್ ಪರ್ಬಾತ್ ಎಂಬ ಭಾರತೀಯನಿಗೆ ಏಳುವರ್ಷ ಶಿಕ್ಷೆಯನ್ನು ವಿಧಿಸಿದೆ.  36 ವರ್ಷದ ಮಿನೇಶ್ ಪರ್ಬಾತ್ ತನ್ನ ಪ್ರೇಯಸಿ ಲೀಸಾ ವಾಟ್ಲಿಂಗ್ ಜತೆ  ಕುಳಿತು ಕಾರು ಚಾಲನೆ ಮಾಡುತ್ತಿದ್ದಾಗ ಅಪಘಾತ ಸಂಭವಿಸಿತ್ತು.

ಪರ್ಬಾತ್ ಅವರ ಬಿಎಂಡಬ್ಲ್ಯು ಕಾರು ಗಂಟೆಗೆ 80 ಕಿಮೀ ವೇಗದಲ್ಲಿ ಸಾಗಿದ್ದಾಗ ಸೆಂಟ್ರಲ್ ರಿಸರ್ವೇಷನ್‌ಗೆ ಬಡಿದು ತಡೆಗೋಡೆಗೆ ಡಿಕ್ಕಿಹೊಡೆದಿದ್ದರಿಂದ ಕಾರಿನ ಬಾಗಿಲು ತೆರೆದು ಪ್ರೇಯಸಿ ವಾಟ್ಲಿಂಗ್ ರಸ್ತೆಗೆ ಚಿಮ್ಮಿ ಬಿದ್ದು ಮೃತರಾಗಿದ್ದರು. ರಸ್ತೆಯಲ್ಲಿ ವಾಟ್ಲಿಂಗ್ ಬರೀ ಬ್ರಾ ಮತ್ತು ಟಿ ಶರ್ಟ್ ಧರಿಸಿದ್ದರು. ಕಾರಿನ ಅವಶೇಷದಲ್ಲಿ ಪರ್ಬಾತ್ ಪ್ಯಾಂಟ್ ಮತ್ತು ಒಳಚೆಡ್ಡಿ ಮೊಳಕಾಲಿನ ಕೆಳಗೆ ಇಳಿದಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿ ದೂರು ನೀಡಿದ್ದರು. 
 
ಅವನು ದೇಹದಲ್ಲಿ ಆಲ್ಕೋಹಾಲ್ ಮಟ್ಟ ಕೂಡ 102 ಮಿಲಿಗ್ರಾಂಗಳಷ್ಟಿತ್ತು. ಬ್ರಿಟನ್ ಡ್ರಿಂಕ್ ಡ್ರೈವ್ ಮಿತಿ 80 ಮಿಲಿಗ್ರಾಂಗಳಾಗಿವೆ.  ಹಿಂಭಾಗದಲ್ಲಿ ಕುಳಿತಿದ್ದ ಪ್ರೇಯಸಿ ಲೈಂಗಿಕ ಆಸೆ ವ್ಯಕ್ತಪಡಿಸಿ ಮುಂಭಾಗಕ್ಕೆ ಬಂದಿದ್ದಳು. ತಾನು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದು ಯಾವುದೇ ಲೈಂಗಿಕ ಕ್ರಿಯೆ ನಡೆದಿಲ್ಲ ಎಂದು ಪರ್ಬಾತ್ ಹೇಳಿದ್ದರು.  
ಆದಾಗ್ಯೂ ನ್ಯಾಯಾಧೀಶರು ಪರ್ಬಾತ್ ಕಥೆಯನ್ನು ನಂಬದೇ ಅಪಾಯಕಾರಿ ಚಾಲನೆ ಮೂಲಕ ಸಾವು ಉಂಟುಮಾಡಿದ್ದಕ್ಕಾಗಿ ಶಿಕ್ಷೆ ವಿಧಿಸಿದರು. 
 

ವೆಬ್ದುನಿಯಾವನ್ನು ಓದಿ