ಜಗತ್ತಿನಾದ್ಯಂತ ಭಯವನ್ನು ಸೃಷ್ಟಿಸಿರುವ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಒತ್ತೆಯಾಳುಗಳ ತಲೆ ಕತ್ತರಿಸುವ ಭಯಾನಕ ವಿಡಿಯೋ ಬಿಡುಗಡೆ ಮಾಡುವುದು ಹೊಸ ಸುದ್ದಿಯೇನಲ್ಲ. ಆದರೆ ಇಂಗ್ಲೀಷ್ ಮಾತನಾಡುತ್ತಿರುವ 10 ವರ್ಷದ ಬಾಲಕನೊಬ್ಬ ಒತ್ತೆಯಾಳುವನ್ನು ಕೊಲ್ಲುತ್ತಿರುವ ಆಘಾತಕಾರಿ, ಬೀಭತ್ಸ ವಿಡಿಯೋವೊಂದನ್ನು ಐಸಿಸ್ ಬಿಡುಗಡೆ ಮಾಡಿದ್ದು ಈ ಮೂಲಕ ಅಮೇರಿಕಕ್ಕೆ ಎಚ್ಚರಿಕೆ ನೀಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಇಂಗ್ಲಿಷ್ನಲ್ಲಿ ಮಾತನಾಡುತ್ತಿರುವ ಪುಟ್ಟ ಬಾಲಕ ದೊಡ್ಡದಾದ ಹರಿತ ಚಾಕುವಿನಿಂದ ಒತ್ತೆಯಾಳುವಿನ ತಲೆಯನ್ನು ಕತ್ತರಿಸಿದ್ದಾನೆ ಮತ್ತು "ಇಸ್ಲಾಮ್ನ ಶರಿಯಾ ವಿರುದ್ಧ ಹೋರಾಡುವುದಕ್ಕೆ ನೀವು ಕಳುಹಿಸಿದ ಸೈನಿಕರಿವರು. ಇಸ್ಲಾಮ್ ಶರಿಯಾವನ್ನು ಕೊನೆಗಾಣಿಸಲು ಸೈನಿಕರನ್ನು ಕಳುಹಿಸುತ್ತಿರುವ ಮತ್ತು ಅವರಿಗೆ ಶಸ್ತ್ರಾಸ್ತ್ರ ಒದಗಿಸಲು ಹಣ ಖರ್ಚು ಮಾಡುತ್ತಿರುವ ಅಮೆರಿಕ, ನಿನಗಿದೋ ಎಚ್ಚರಿಕೆ",ಎಂದು ಗುಡುಗಿದ್ದಾನೆ.