ಲ್ಯಾಂಡಿಂಗ್ ವಿಮಾನದಿಂದ ಸ್ವಲ್ಪದರಲ್ಲೇ ಪಾರಾದ ಪ್ರವಾಸಿ

ಶುಕ್ರವಾರ, 15 ಏಪ್ರಿಲ್ 2016 (14:06 IST)
ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದ ವಿಮಾನದ ವಿಡಿಯೊ ತೆಗೆಯಲು ಯತ್ನಿಸಿದ ಪ್ರವಾಸಿಯೊಬ್ಬ ಕೂದಲೆಳೆಯ ಅಂತರದಲ್ಲಿ ಜೀವಸಹಿತ ಪಾರಾದ ಘಟನೆ ಸೇಂಟ್ ಬಾರ್ಟ್ಸ್ ದ್ವೀಪದಲ್ಲಿ ಸಂಭವಿಸಿದೆ. 360 ಡಿಗ್ರಿ ವಿಡಿಯೊ ಈಗ ಅಂತಾರಾಷ್ಟ್ರೀಯ ಮುಖಪುಟದ ಸುದ್ದಿಯಾಗಿದ್ದು, ವಿಮಾನ ತಲೆಯ ಮೇಲೆ ಹಾದುಹೋದ ಕ್ಷಣದಲ್ಲೇ ತಲೆಬಗ್ಗಿಸಿದ್ದರಿಂದ ಪ್ರವಾಸಿ ಬಚಾವಾಗಿದ್ದಾನೆ. 
 
ನಾನು ಕ್ಯಾಮರಾದ ವೀವ್‌ಫೈಂಡರ್‌ನಲ್ಲಿ ಇಡೀ ಕಾಲ ವೀಕ್ಷಿಸುತ್ತಿದ್ದು, ವಿಮಾನ ಸಮೀಪಿಸಿದ ತಕ್ಷಣವೇ ತಲೆ ಬಗ್ಗಿಸಿದೆ ಎಂದು ಎಕ್ಕಿ ಜೈದಿ ತಿಳಿಸಿದರು. ತಾನು ಸಾರ್ವಜನಿಕ ರಸ್ತೆಯಲ್ಲಿದ್ದು ನಿರ್ಬಂಧಿತ ಪ್ರದೇಶದಲ್ಲಿರಲಿಲ್ಲ. ನನಗೆ ವಿಮಾನದ ಸಮೀಪದ ನೋಟ ಬೇಕಿತ್ತು ಎಂದು ಹೇಳಿದರು.
 
 ಈ ವಿಮಾನನಿಲ್ದಾಣವು ಪೈಲಟ್‌ಗಳಿಗೆ ದುಃಸ್ವಪ್ನವಾಗಿದ್ದು, ಬೆಟ್ಟದ ಮೇಲಿನ ರಸ್ತೆಯ ಮೇಲೆ ಹಾದು ಹೋಗಿ ಕಡೆಗೆ ಚಿಕ್ಕದಾದ ರನ್‌ವೇನಲ್ಲಿ ಲ್ಯಾಂಡ್ ಆಗಬೇಕಾಗಿದೆ. ಆದರೆ ಜೀವವನ್ನೂ ಲೆಕ್ಕಿಸದೇ ಛಾಯಾಚಿತ್ರ ತೆಗೆಯುವ ಛಾಯಾಚಿತ್ರಗ್ರಾಹಕರಿಂದ ಪೈಲಟ್‌ಗಳಿಗೆ ಮತ್ತಷ್ಟು ಸಮಸ್ಯೆಯಾಗಿದೆ.  360 ಡಿಗ್ರಿ ವಿಡಿಯೊದಲ್ಲಿ ಆ ವ್ಯಕ್ತಿ ತಲೆಯನ್ನು ಬಗ್ಗಿಸಿದ ಕೂಡಲೇ ಸಹ ಛಾಯಾಗ್ರಾಹಕ ಸೆಬಾಸ್ಟಿಯನ್ ಪಾಲಿಟಾನೊ ಈ ಅಭೂತಪೂರ್ವ ಕ್ಷಣವನ್ನು ಸೆರೆಹಿಡಿದಿದ್ದಾನೆ. 
 
 

ವೆಬ್ದುನಿಯಾವನ್ನು ಓದಿ