ಅಮೇರಿಕಾದ ಅಧ್ಯಕ್ಷನಾಗ ಹೊರಟಿರುವ ಭಾರತೀಯ?

ಗುರುವಾರ, 18 ಸೆಪ್ಟಂಬರ್ 2014 (15:19 IST)
ಅಮೇರಿಕಾದ ಲೂಸಿಯಾನ ಪ್ರಾಂತ್ಯದ ಗವರ್ನರ್,  ರಿಪಬ್ಲಿಕನ್ ಪಕ್ಷದ ಸದಸ್ಯರಾಗಿರುವ  ಆಗಿರುವ ಭಾರತೀಯ ಸಂಜಾತ ಅಮೆರಿಕ ನಾಯಕ ಬಾಬ್ಬಿ ಜಿಂದಾಲ್ 2016ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ನವೆಂಬರ್ ತಿಂಗಳಲ್ಲಿ  ನಡೆಯಲಿರುವ ಕಾಂರ್ಗೆಸ್ ಚುನಾವಣೆಯ ನಂತರ ಅವರು ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. 

ಆದರೆ ಸಿಎನ್ಎನ್ / ಓಆರ್‌ಸಿ  ನ್ಯೂ ಹ್ಯಾಂಪ್ಶೈರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ  ರಿಪಬ್ಲಿಕನ್‌ನ ಪ್ರಾಥಮಿಕ ಮತದಾರರಲ್ಲಿ ಶೇಕಡಾ ಮೂರು ಜನರಷ್ಟೇ ಅಧ್ಯಕ್ಷ ಪದದ ಅಭ್ಯರ್ಥಿಯಾಗಿ ಅವರನ್ನು ಬೆಂಬಲಿಸುತ್ತಾರೆ ಎಂದು ತಿಳಿದು ಬಂದಿದೆ. 
 
ಉಲ್ಲೇಖನೀಯವಾದುದೆಂದರೆ 2003ರಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಲೂಸಿಯಾನದಲ್ಲಿ ಸ್ಪರ್ಧಿಸಿ ಸೋತರೂ 2004ರಲ್ಲಿ ಹೌಸ್ ಆಫ್ ರೆಪ್ರಸೆಂಟೆಟೀವ್ಸ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯ ಮೆಟ್ಟಿಲುಗಳನ್ನು ಏರಿದರು. 2007ರಲ್ಲಿ ಎರಡನೇ ಬಾರಿ ಗವರ್ನರ್ ಆಗಿ ಆಯ್ಕೆಯಾದ ಅವರು 2011ರಲ್ಲೂ ಲೂಸಿಯಾನಾದ ಗವರ್ನರ್ ಆಗಿ ಪುನಃ ಆಯ್ಕೆಯಾದರು.
 
ಕೆಲವು ವರ್ಷಗಳಿಂದ ಹತ್ತಿರದಿಂದ ಬಾಬ್ಬಿ ಜಿಂದಾಲ್ ಅವರನ್ನು ನೋಡುತ್ತಿರುವ ರಾಜಕೀಯ ವಿಶ್ಲೇಷಕರ ಪ್ರಕಾರ,ಅವರ ಗವರ್ನರ್‌ಗಿರಿ ಕೊನೆಯಾಗುತ್ತಿದ್ದು, ರಾಷ್ಟ್ರಾಧ್ಯಕ್ಷತೆಯ ಮಹತ್ವಾಕಾಂಕ್ಷೆ ಆರಂಭಗೊಂಡಿದೆ.
 
ಬಾಬ್ಬಿ ಜಿಂದಾಲ್ ಅವರ ಪೋಷಕರಾದ ಅಮರ್ ಮತ್ತು ರಾಜ್ ಜಿಂದಾಲ್ ಪಂಜಾಬ್‌ನಿಂದ ಲೂಸಿಯಾನಕ್ಕೆ ವಲಸೆ ಬಂದವರು. ತಂದೆ ಲೂಸಿಯಾನದಲ್ಲಿ ಮಾಹಿತಿ ತಂತ್ರಜ್ಞಾನ ಕಾರ್ಯಪಡೆಯಲ್ಲಿ ನಿರ್ದೇಶಕರಾಗಿದ್ದರು. ತಾಯಿ ಕಾರ್ಮಿಕ ಸಚಿವೆ ಗ್ಯಾರಿ ಫಾರ್ಸ್ಟರ್ ಅವರ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.
 
ಲೂಸಿಯಾನದ ಬನ್ ರೌಜ್‌ನಲ್ಲಿ 1971ರ ಜೂನ್ 10ರಂದು ಜನಿಸಿರುವ ಜಿಂದಾಲ್ ಬ್ರೌನ್ ಯುನಿವರ್ಸಿಟಿ ನ್ಯೂ ಕಾಲೇಜು ಆಕ್ಸ್‌ಫರ್ಡ್‌ನಲ್ಲಿ ಎಂ.ಲಿಟ್ ಪದವಿ ಪಡೆದಿದ್ದಾರೆ.
 
ಲೂಸಿಯಾನದ ಹೆಲ್ತ್ ಆಂಡ್ ಹಾಸ್ಪಿಟಲ್ ವಿಭಾಗ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಅವರು , 2001ರಲ್ಲಿ ಜಾರ್ಜ್ ಬುಷ್ ಅಧಿಕಾರಾವಧಿಯಲ್ಲಿ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಗೆ ಪ್ರಮುಖ ಸಲಹೆಗಾರರಾಗಿ ಸೇರ್ಪಡೆಗೊಂಡರು.

ವೆಬ್ದುನಿಯಾವನ್ನು ಓದಿ