ಹಡಗಿನ ಸಿಬ್ಬಂದಿಯ ಪ್ರಮಾದದಿಂದ 300 ಸಾವು: ದಕ್ಷಿಣ ಕೊರಿಯಾ ಅಧ್ಯಕ್ಷ

ಸೋಮವಾರ, 21 ಏಪ್ರಿಲ್ 2014 (16:56 IST)
ಸಿಯೋಲ್: ಸುಮಾರು 300 ಜನರು ಸತ್ತಿರುವರೆಂದು ಶಂಕಿಸಲಾದ ಮುಳುಗಿದ ದಕ್ಷಿಣ ಕೊರಿಯಾ ಹಡಗಿನ ಸಿಬ್ಬಂದಿ ಮತ್ತು ಕ್ಯಾಪ್ಟನ್ ಕ್ಷಮಿಸಲಾಗದ, ಹತ್ಯಾಕಾರಿ ಕ್ರಮಗಳನ್ನು ಎಸಗಿದ್ದಾರೆಂದು ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಜೀನ್ ಹೈ ತಿಳಿಸಿದ್ದಾರೆ.
 
ಕ್ಯಾಬಿನೆಟ್ ಸಭೆಯಲ್ಲಿ ಅವರು ಪ್ರತಿಕ್ರಿಯಿಸುತ್ತಾ,  ಹಡಗು ಮುಳುಗಿದಾಗ ಕ್ಯಾಪ್ಟನ್ ಆರಂಭದಲ್ಲಿ ಪ್ರಯಾಣಿಕರಿಗೆ ಕೋಣೆಗಳಲ್ಲಿರುವಂತೆ ಸೂಚಿಸಿ ತೆರವು ಆದೇಶ ನೀಡಲು ಅರ್ಧಗಂಟೆಗಿಂತ ಹೆಚ್ಚು ಸಮಯವನ್ನು ಕಾದರು. ಆಗ ಹಡಗು ಬಹುಮಟ್ಟಿಗೆ ವಾಲಿಕೊಂಡು 240 ಪ್ರಯಾಣಿಕರು ಅಡಿಯಲ್ಲಿ ಸಿಕ್ಕಿಬಿದ್ದರು ಎಂದು ತಿಳಿಸಿದರು.

ಪ್ರಯಾಣಿಕರಿಗೆ ಹಡಗಿನ ಕೋಣೆಗಳಲ್ಲಿ ಇರುವಂತೆ ಸೂಚಿಸಿ, ಪ್ರಯಾಣಿಕರನ್ನು ಅಲ್ಲೇ ಬಿಟ್ಟು ತಪ್ಪಿಸಿಕೊಂಡವರಲ್ಲಿ ಅವರೇ ಮೊದಲಿಗರಾಗಿದ್ದರು. ಕಾನೂನುಬದ್ಧವಾಗಿ ಮತ್ತು ನ್ಯಾಯಸಮ್ಮತವಾಗಿ ನೋಡುವುದಾದರೆ ಇದು ಊಹಿಸಲಾಗದ ಕೃತ್ಯ ಎಂದು ನುಡಿದರು.

ವೆಬ್ದುನಿಯಾವನ್ನು ಓದಿ