ದ.ಕೊರಿಯಾ, ಅಮೆರಿಕ ಸಮರಾಭ್ಯಾಸ: ಉತ್ತರ ಕೊರಿಯಾಕ್ಕೆ ಆಕ್ರೋಶ

ಬುಧವಾರ, 24 ಫೆಬ್ರವರಿ 2016 (12:19 IST)
ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ, ನಿಮ್ಮ ಭಂಡತನದ ಕ್ರಮಗಳಿಂದ ನಿಮ್ಮ ಸರ್ವಾಧಿಕಾರಿ ವ್ಯವಸ್ಥೆ ಬಹುಬೇಗನೇ ಕುಸಿಯುತ್ತದೆ ಎಂದು ದಕ್ಷಿಣ ಕೊರಿಯಾ ತನ್ನ ನೆರೆಯ ರಾಷ್ಟ್ರ ಉತ್ತರ ಕೊರಿಯಾಗೆ ಎಚ್ಚರಿಸಿದೆ. 
 
ಅಮೆರಿಕ -ದಕ್ಷಿಣ ಕೊರಿಯಾದ ಜಂಟಿ ಸಮರಾಭ್ಯಾಸದ ಬಗ್ಗೆ ಉತ್ತರ ಕೊರಿಯಾ ಮಿಲಿಟರಿ ಸುಪ್ರೀಂ ಕಮಾಂಡ್ ಆಕ್ರೋಶಗೊಂಡಿದ್ದು, ಸೋಲ್ ಅಧ್ಯಕ್ಷರ ಬ್ಲೂ ಹೌಸ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿತ್ತು. 
 
 ಉತ್ತರ ಕೊರಿಯಾ ಬೆದರಿಕೆಗೆ ಪ್ರತ್ಯುತ್ತರ ನೀಡಿದ ದಕ್ಷಿಣ ಕೊರಿಯಾ ಉತ್ತರ ಕೊರಿಯಾ ನಮ್ಮ ಎಚ್ಚರಿಕೆಯನ್ನು ಕಡೆಗಣಿಸಿದರೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. 
 
ಉತ್ತರ ಕೊರಿಯಾ ತನ್ನ ಭಂಡತನದ ಪ್ರಚೋದನೆಗಳಿಂದ ಉದ್ಭವಿಸುವ ಎಲ್ಲಾ ಸಮಸ್ಯೆಗಳಿಗೆ ಹೊಣೆಯಾಗುತ್ತದೆಂದು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದರಿಂದ ಉತ್ತರಕೊರಿಯಾದ ಸರ್ವಾಧಿಕಾರಿ ವ್ಯವಸ್ಥೆಯ ಕುಸಿತ ಶೀಘ್ರದಲ್ಲಿ ಉಂಟಾಗುತ್ತದೆಂದು ಎಂದು ಎಚ್ಚರಿಸುವುದಾಗಿ ದ. ಕೊರಿಯಾ ತಿಳಿಸಿದೆ.
 
ಸೋಲ್ ಮತ್ತು ವಾಷಿಂಗ್ಟನ್ ಮುಂದಿನ ತಿಂಗಳು ಅತೀ ದೊಡ್ಡ ವಾರ್ಷಿಕ ಸಮರಾಭ್ಯಾಸವನ್ನು ನಡೆಸಲಿದೆ. ಉತ್ತರದ ಇತ್ತೀಚಿನ ಅಣ್ವಸ್ತ್ರ ಪರೀಕ್ಷೆ ಮತ್ತು ರಾಕೆಟ್ ಉಡಾವಣೆಗೆ ಉತ್ತರವಾಗಿ ಈ ಸಮರಾಭ್ಯಾಸ ನಡೆಸಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ