ದಕ್ಷಿಣ ಕೊರಿಯಾದ ಮೇಲೆ ದಾಳಿಗೆ ಉತ್ತರ ಕೊರಿಯಾ ಸಿದ್ಧತೆ

ಗುರುವಾರ, 18 ಫೆಬ್ರವರಿ 2016 (18:48 IST)
ಉತ್ತರಕೊರಿಯಾದ ಮುಖಂಡ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾದ ಮೇಲೆ ದಾಳಿಗೆ ಸಿದ್ಧತೆಗಳನ್ನು ಮಾಡುವಂತೆ ಇತ್ತೀಚೆಗೆ ಆದೇಶ ನೀಡಿದ್ದಾರೆಂದು ಗೊತ್ತಾಗಿದೆ. ಈ ಕುರಿತು ದಕ್ಷಿಣ ಕೊರಿಯ ಗುಪ್ತಚರ ಸಂಸ್ಥೆ ಪಕ್ಷದ ಅಧಿಕಾರಿಗಳಿಗೆ  ಮಾಹಿತಿ ನೀಡಿದೆ.

ಉತ್ತರಕೊರಿಯಾದ ಅಣ್ವಸ್ತ್ರ ಪರೀಕ್ಷೆ ಮತ್ತು ಕ್ಷಿಪಣಿ ಉಡಾವಣೆಯ ಬಳಿಕ ಕೊರಿಯ ಉಪಖಂಡದಲ್ಲಿ ಉದ್ವಿಗ್ನ ವಾತಾವರಣ ಮೂಡಿದ್ದರ ಲಕ್ಷಣ ಇದಾಗಿದೆ.  ದಕ್ಷಿಣ ಕೊರಿಯಾ ಮೇಲೆ ಸೈಬರ್ ಮತ್ತಿತರ ದಾಳಿಗಳನ್ನು ಆಯೋಜಿಸಲು ಸಕ್ರಿಯ ಸಾಮರ್ಥ್ಯ ಗಳಿಸಿಕೊಳ್ಳಬೇಕೆಂಬ ಕಿಮ್ ಆದೇಶವನ್ನು ಅನುಷ್ಠಾನಕ್ಕೆ ತರಲು ಕಿಮ್ ಗುಪ್ತಚರ ಸಂಸ್ಥೆ ಕಾರ್ಯಾರಂಭ ಮಾಡಿದೆ ಎಂದು ದ.ಕೊರಿಯಾ ಸಯೆನುರಿ ಪಕ್ಷದ ಅಧಿಕಾರಿಯೊಬ್ಬರು ತಿಳಿಸಿದರು. 

 ಉತ್ತರ ಕೊರಿಯಾ ದಕ್ಷಿಣ ಕೊರಿಯಾ ಮೇಲೆ ದಾಳಿ ಮಾಡಿದ ಇತಿಹಾಸ ಹೊಂದಿದೆ. ಆದರೆ ಎಲ್ಲವನ್ನೂ ರಹಸ್ಯವಾಗಿಡುವ ಉತ್ತರ ಕೊರಿಯಾದಲ್ಲಿ ನಿಜವಾಗಲೂ ಏನಾಗುತ್ತಿದೆ ಎಂದು ಸ್ವತಂತ್ರವಾಗಿ ದೃಢಪಡಿಸುವುದು ಅಸಾಧ್ಯ ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ