ಅಮೆರಿಕದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಭಾರತೀಯನ ನೇಮಕ ಸಾಧ್ಯತೆ

ಶನಿವಾರ, 5 ಮಾರ್ಚ್ 2016 (15:41 IST)
ರಿಪಬ್ಲಿಕನ್ ಪಕ್ಷದ ಬೆಂಬಲ ಪಡೆದಿರುವ ಅನಿವಾಸಿ ಭಾರತೀಯ ಶ್ರೀ ಶ್ರೀನಿವಾಸನ್ ಅವರನ್ನು ಅಧ್ಯಕ್ಷ ಬರಾಕ್ ಒಬಾಮಾ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಮೆರ್ರಿಕ್. ಬಿ.ಗಾರ್ಲೆಂಡ್‌ ಮತ್ತು ಶ್ರೀ ಶ್ರೀನಿವಾಸನ್ ಅವರನ್ನು ನೇಮಕ ಮಾಡುವ ಆಸಕ್ತಿ ತೋರಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಖಾಲಿಯಿರುವ  ನ್ಯಾಯಮೂರ್ತಿ ಹುದ್ದೆ ಭರ್ತಿ ಮಾಡುವ ಕುರಿತಂತೆ ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. 
 
ನ್ಯಾಯಮೂರ್ತಿ ಗಾರ್ಲಾಂಡ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸನ್ ಅವರ ಹಿನ್ನೆಲೆಯಲ್ಲಿ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ ತನಿಖೆ ನಡೆಸುತ್ತಿದೆ ಎಂದು ಅನಾಮಧೇಯ ಮೂಲಗಳು ತಿಳಿಸಿವೆ.
 
ಇಟಲಿ ಮೂಲದ ಅಮೆರಿಕ ನಿವಾಸಿಯಾದ ಮುಖ್ಯ ನ್ಯಾಯಮೂರ್ತಿ ಅಂಟೋನಿನ್ ಸ್ಕಾಲಿಯಾ ಅವರ ನಿಧನದ ಹಿನ್ನೆಲೆಯಲ್ಲಿ ದೇಶದ ನ್ಯಾಯಾಲಯದ ಅತ್ಯುನ್ನತ ಹುದ್ದೆ ತೆರವಾಗಿದೆ. 

ವೆಬ್ದುನಿಯಾವನ್ನು ಓದಿ