ಇನ್ನೊಬ್ಬನ ಪತ್ನಿಯನ್ನು ಕದ್ದು ಮದುವೆಯಾಗುತ್ತಾರಿಲ್ಲಿ!

ಮಂಗಳವಾರ, 13 ಜನವರಿ 2015 (16:25 IST)
ಮದುವೆಯ ರೀತಿ ರಿವಾಜುಗಳು ದೇಶ, ಧರ್ಮ, ಜಾತಿ , ಜನಾಂಗಗಳನ್ನು ಆಧರಿಸಿ ಭಿನ್ನ ಭಿನ್ನ ವಾಗಿರುತ್ತವೆ. ಆದಿವಾಸಿಗಳ ಸಮುದಾಯದಲ್ಲಂತೂ ವಿವಾಹದ ಸಂಪ್ರದಾಯಗಳು ಸಂಪೂರ್ಣ  ವಿಭಿನ್ನವಾಗಿರುತ್ತವೆ.  ದಕ್ಷಿಣ ಆಫ್ರಿಕಾದ 'ವೋದಾಬ್ಬೆ'  ಎಂಬ ಸಮುದಾಯಕ್ಕೆ ಸೇರಿದ ಆದಿವಾಸಿಗಳ ಮದುವೆಯ ರೀತಿಯಂತೂ ನಿಮ್ಮನ್ನು ದಂಗು ಬಡಿಸುತ್ತದೆ. ಒಬ್ಬರು ಇನ್ನೊಬ್ಬರ ಪತ್ನಿಯನ್ನು ಅಪಹರಿಸಿ ಮದುವೆಯಾಗುವ ವಿಲಕ್ಷಣ ಸಂಪ್ರದಾಯ ಅಲ್ಲಿಯದು. 
ಈ ಜನರಲ್ಲಿ ಮೊದಲ ಮದುವೆ  ಕುಟುಂಬದವರ ಒಪ್ಪಿಗೆಯ ಅನುಗುಣವಾಗಿ ನಡೆಯುತ್ತದೆ. ಅವರು ಎರಡನೇ ಮದುವೆಯನ್ನು ಮಾಡಿಕೊಳ್ಳಲು ಸಹ ಅರ್ಹರಾಗಿರುತ್ತಾರೆ. ಆದರೆ ಮತ್ತೆ ಮದುವೆಯಾಗ ಬಯಸುವವರು ಪರರ ಪತ್ನಿಯನ್ನು ಅಪಹರಿಸಲೇ ಬೇಕೆಂಬ ವಿಚಿತ್ರ ನಿಯಮವಿದೆ ಈ ಜನಾಂಗದಲ್ಲಿ. ಅಪಹರಣ ಮಾಡದಿದ್ದರೆ ಅವರಿಗೆ ಎರಡನೇ ಮದುವೆ ಮಾಡಿಕೊಳ್ಳಲು ಅನುಮತಿಯನ್ನು ನೀಡಲಾಗುವುದಿಲ್ಲವಂತೆ. 
 
'ವೋದಾಬ್ಬೆ' ಆದಿವಾಸಿಗಳು ಪ್ರತಿವರ್ಷ ಗೆರೆವೋಲ್ ಎಂಬ ಹಬ್ಬವನ್ನು ಆಯೋಜಿಸುತ್ತಾರೆ. ಈ ಸಂದರ್ಭದಲ್ಲಿ ಯುವಕರು ತಮ್ಮ ಮುಖಕ್ಕೆ ಬಣ್ಣ ಬಳಿದುಕೊಂಡು ವಿಚಿತ್ರ ಅಲಂಕಾರವನ್ನು ಮಾಡಿಕೊಳ್ಳುತ್ತಾರೆ. ನಂತರ ಸಾಮೂಹಿಕ ನೃತ್ಯ ಮತ್ತು ಇನ್ನಿತರ ವಿಭಿನ್ನ ಚಟುವಟಿಕೆಗಳನ್ನು ಮಾಡುವುದರ ಮೂಲಕ ಇನ್ನೊಬ್ಬರ ಹೆಂಡತಿಯನ್ನು ಆಕರ್ಷಿಸುವ ಕಸರತ್ತು ಮಾಡುತ್ತಾರೆ. 
 
ಆದರೆ ಪಟಾಯಿಸುವ ಈ ಪ್ರಯತ್ನ ಆಕೆಯ ಗಂಡನಿಗೆ ತಿಳಿಯದಿರುವಂತೆ ಜಾಗರೂಕರಾಗಿರಬೇಕು. ಆಕೆ ಒಪ್ಪಿದರೆ ಅವಳ ಜತೆ ಅಲ್ಲಿಂದವರು ಪರಾರಿಯಾಗುತ್ತಾರೆ. ನಂತರ ಸಮುದಾಯದ ಜನರು ಅವರಿಬ್ಬರನ್ನು ಹುಡುಕಿ ಮದುವೆ ಮಾಡಿಸುತ್ತಾರೆ. ಇದನ್ನು ಪ್ರೇಮ ವಿವಾಹದ ರೂಪದಲ್ಲಿ ಸ್ವೀಕರಿಸಲಾಗುತ್ತದೆ. 

ವೆಬ್ದುನಿಯಾವನ್ನು ಓದಿ