ಶಕ್ತಿ ಕಳೆದುಕೊಳ್ಳುತ್ತಿದೆ ಎಚ್ಐವಿ ವೈರಸ್!

ಬುಧವಾರ, 3 ಡಿಸೆಂಬರ್ 2014 (11:02 IST)
ಎಚ್ಐವಿ... ಸಾವಿನ ಸ್ನೇಹಿತ  ವೈರಸ್ .. ಕಳೆದ ಹಲವಾರು ದಶಕಗಳಿಂದ ಜಗತ್ತನ್ನು ಕಾಡುತ್ತಿರುವ ಮಹಾ ಶತ್ರು...ವಿಶ್ವದ ಅತ್ಯಂತ ಭಯಾನಕ ವೈರಸ್... ನಮ್ಮ ರೋಗನಿರೋಧಕ ಶಕ್ತಿಯನ್ನು  ಜೀರ್ಣಿಸಿ ಸಾವಿನ ದವಡೆಗೆ ದೂಡಿ ಹಾಕುವ ಈ ಏಡ್ಸ್ ಕಾರಕ ವೈರಸ್ ತನ್ನ ಸಾಮರ್ಥ್ಯವನ್ನ ಕಳೆದುಕೊಳ್ಳುತ್ತಿದೆಯಂತೆ.

 
ಬ್ರಿಟನ್ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಲ್ಲಿ ಎಚ್ಐವಿ ತನ್ನ ಮೊದಲಿನ ಪರಿಣಾಮಕಾರಿ ಶಕ್ತಿ ಮತ್ತು ಸೋಂಕು ಹರಡುವ ಶಕ್ತಿಯನ್ನು ಕಳೆದುಕೊಂಡಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
 
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಕುರಿತು ಅಧ್ಯಯನ ಕೈಗೊಂಡಿತ್ತು. ಅವರು ಪಡೆದ ಫಲಿತಾಂಶದ ಪ್ರಕಾರ ಎಚ್ಐವಿ ವೈರಸ್ ದೇಹವನ್ನು ಏಡ್ಸ್ ಸ್ಥಿತಿಗೆ ನೂಕಲು ಮೊದಲಿಗಿಂತಲೂ ಅತಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆಯಂತೆ.
 
ಎಚ್ಐವಿ, ಏಡ್ಸ್ ಆಗಿ ಬದಲಾಗುವ ಸಮಯ ದೀರ್ಘಕಾಲದ್ದಾಗಿದುದರಿಂದ, ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಸಮಯ ಲಭ್ಯವಾಗುತ್ತದೆಯಂತೆ. 
 
ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಮರ್ಥ್ಯ ಸಹ ಎಚ್ಐವಿ ವೈರಸ್‌ನಲ್ಲಿ ಕಡಿಮೆಯಾಗುತ್ತ ಸಾಗಿದೆ ಎಂಬ ಫಲಿತಾಂಶ ನೀಡಿದೆ ಈ ಸಂಶೋಧನೆ.
 
ಇದು ನಿಜಕ್ಕೂ ಎಚ್ಐವಿ ಬಾಧಿತರಲ್ಲಿ ಸಂತಷವನ್ನು ತರುವಂತ ವಿಚಾರ....

ವೆಬ್ದುನಿಯಾವನ್ನು ಓದಿ