ನೇಪಾಳ ಪ್ರಧಾನಿ ಹುದ್ದೆಗೆ ಸುಶೀಲ್ ಕೊಯಿರಾಲಾ ಔಪಚಾರಿಕ ರಾಜೀನಾಮೆ

ಶನಿವಾರ, 10 ಅಕ್ಟೋಬರ್ 2015 (20:35 IST)
ನೇಪಾಳದ ಪ್ರಧಾನಮಂತ್ರಿ ಸುಶೀಲ್ ಕೊಯಿರಾಲಾ  ಅಧ್ಯಕ್ಷ ರಾಮಬರಣ್ ಯಾದವ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.  ನೂತನ ಸರ್ಕಾರ ಸ್ಥಾಪನೆಯಾಗುವ ತನಕ ಆಡಳಿತ ವ್ಯವಹಾರಗಳನ್ನು ನಿರ್ವಹಿಸುವಂತೆ ಯಾದವ್ ಸೂಚಿಸಿದ್ದಾರೆ.
 
ನಾಳೆ ಸಂಸತ್ತು ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿರುವದುರಿಂದ ಕೊಯಿರಾಲಾ ಅವರ ರಾಜೀನಾಮೆ ಬರೀ ಔಪಚಾರಿಕವಾಗಿದ್ದು, ಪ್ರಧಾನಮಂತ್ರಿ ರೇಸ್‌ನಲ್ಲಿ ಪುನಃ ಅವರು ನಿಂತಿದ್ದಾರೆ. 
 
ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಕೊಯಿರಾಲಾ ಪ್ರಧಾನಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ವಿರುದ್ಧ ಅವರು ಸ್ಪರ್ಧಿಸಿದ್ದಾರೆ. 
 
ನೇಪಾಳದ ಹೊಸ ಸಂವಿಧಾನದ ವಿರುದ್ಧ ಮಾದೇಶಿ ಜನರು ಪ್ರತಿಭಟಿಸುತ್ತಿದ್ದು, ಭಾರತದ ಜತೆಗಿನ ವ್ಯಾಪಾರದ ಪಾಯಿಂಟ್‌ಗಳನ್ನು ಬಂದ್ ಮಾಡಿರುವುದರಿಂದ ಅವಶ್ಯಕ ವಸ್ತುಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನನ್ನಗಳ ಪೂರೈಕೆಗೆ ಅಡ್ಡಿಯಾಗಿದೆ.  ಈ ಸಮಸ್ಯೆ ಪರಿಹಾರಕ್ಕೆ ನೇಪಾಳ ವಿದೇಶಾಂಗ ಸಚಿವರ ನೇತೃತ್ವದ ಮೂವರ ತಂಡವನ್ನು ರಚಿಸಿದೆ. 
 

ವೆಬ್ದುನಿಯಾವನ್ನು ಓದಿ