ಭಾರತೀಯ ಮಹಿಳೆಯನ್ನು ಕಾಪಾಡಿ ಮತ್ತೊಮ್ಮೆ ಹೀರೋ ಆದ ಸಚಿವೆ ಸುಷ್ಮಾ ಸ್ವರಾಜ್!

ಮಂಗಳವಾರ, 21 ಮಾರ್ಚ್ 2017 (10:56 IST)
ನವದೆಹಲಿ: ವಿದೇಶದಲ್ಲಿರುವ ಭಾರತೀಯರ ನೆರವಿಗೆ ಕೇಂದ್ರದ ವಿದೇಶಾಂಗ ಸಚಿವೆ ಧಾವಿಸುತ್ತಾರೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿ. ಪಾಕಿಸ್ತಾನಿ ಪತಿಯಿಂದ ಕಿರುಕುಳಕ್ಕೊಳಗಾಗಿರುವ ಭಾರತೀಯ ಮೂಲದ ಮಹಿಳೆಯ ನೆರವಿಗೆ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ.

 

 
ಮೊಹಮ್ಮದೀಯ ಬೇಗಂ ಎನ್ನುವ ಮಹಿಳೆ ಪಾಕಿಸ್ತಾನದ ಯುವಕನನ್ನು ಮದುವೆಯಾಗಿ ಅಲ್ಲೇ ನೆಲೆಸಿದ್ದಳು. ಆದರೆ ಆಕೆಗೆ ಅತ್ತೆ ಮನೆಯಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದರಲ್ಲದೆ, ನಿನ್ನನ್ನು ಜೀವಂತವಾಗಿ ಭಾರತಕ್ಕೆ ಮರಳಲು ಬಿಡುವುದಿಲ್ಲ ಎಂದು ಕಿರುಕುಳ ನೀಡುತ್ತಿದ್ದನಂತೆ.

 
ಈ ಬಗ್ಗೆ ಮಹಿಳೆಯ ತಂದೆ ಮೊಹಮ್ಮದ್ ಅಕ್ಬರ್ ಸಾಮಾಜಿಕ ಜಾಲತಾಣದ ನೆರವಿನಿಂದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ತಕ್ಷಣ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಅವರ ಮೂಲಕ ಸಂತ್ರಸ್ತ ಮಹಿಳೆಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

 
ಇದನ್ನು ಸ್ವತಃ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಆಕೆ ಭಾರತಕ್ಕೆ ಮರಳಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುವಂತೆ ಸಚಿವರು ಭಾರತೀಯ ರಾಯಭಾರ ಕಚೇರಿಗೆ ಆದೇಶ ನೀಡಿದ್ದಾರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ