ಪಶುಪತಿನಾಥ ಸನ್ನಿಧಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಭಾನುವಾರ, 27 ಜುಲೈ 2014 (12:20 IST)
ಮೂರು ದಿನಗಳ ನೇಪಾಳ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ  ಸುಷ್ಮಾ ಸ್ವರಾಜ್  ಇಂದು ದೇಶದ ರಾಜಧಾನಿ ಕಠ್ಮಂಡುವಿನ ಹೃದಯ ಭಾಗದಲ್ಲಿರುವ ಜಗತ್ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಸ್ಥಾನಕ್ಕೆ ಅವರಿಗೆ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. ಸ್ವಾಗತದ ಭಾಗವಾಗಿ  100 ಮಕ್ಕಳು ವೇದ ಮಂತ್ರಗಳನ್ನು ಪಠಿಸಿದರೆ, ಹಿರಿಯ ಅರ್ಚಕರು ಹೂಮಾಲೆಯೊಂದಿಗೆ ಶುಭ ಕೋರಿದರು. 
 
ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದ ಅವರು ಪಶುಪತಿನಾಥನ ಪಾದದಡಿಯಲ್ಲಿ ತಮ್ಮ ಪ್ರಾರ್ಥನೆ ಸಲ್ಲಿಸಿದರು. 
 
ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ನೇಪಾಳದಲ್ಲಿರುವ ಭಾರತೀಯ ರಾಯಭಾರಿ  ರಂಜಿತ್ ರೇ ಮತ್ತು ಅವರ ನಿಯೋಗದ ಇತರ ಹಿರಿಯ ಅಧಿಕಾರಿಗಳು ಈ ಶುಭ ಸಂದರ್ಭದಲ್ಲಿ ಸ್ವರಾಜ್ ಅವರಿಗೆ ಸಾಥ್ ನೀಡಿದ್ದರು. 
 
ಬಾಗಮತೀ ನದಿಯ ತಟದಲ್ಲಿರುವ ಪಶುಪತಿನಾಥ ದೇವಾಲಯ ಜಗತ್ತಿನಲ್ಲಿರುವ ಅತಿ ಪ್ರಸಿದ್ಧ ಹಿಂದು ದೇವಾಲಯಗಳಲ್ಲಿ  ಒಂದಾಗಿದ್ದು, 
ವಿಶ್ವಸಂಸ್ಥೆ ಇದನ್ನು  ವಿಶ್ವದ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. 

ವೆಬ್ದುನಿಯಾವನ್ನು ಓದಿ