ತೈವಾನ್ ವಿಮಾನ ಪತನ: 51 ಪ್ರಯಾಣಿಕರ ದುರ್ಮರಣ

ಬುಧವಾರ, 23 ಜುಲೈ 2014 (19:24 IST)
ತೈವಾನ್‌ನ ಪೆಂಗು ಕೌಂಟಿಯಲ್ಲಿ ಟ್ರಾನ್ಸ್ ಏಷ್ಯಾ ವಿಮಾನ ಪತನಗೊಂಡಿದ್ದು, 51 ಜನರು ದುರ್ಮರಣವಪ್ಪಿದ್ದಾರೆ. ತುರ್ತು ಭೂಸ್ಪರ್ಶದ ವೇಳೆ ವಿಮಾನ ಅಪಘಾತ ಸಂಭವಿಸಿದೆ. ಕೌಶಿಂಗ್‌ನಿಂದ ಪೆಂಗುವಿಗೆ ವಿಮಾನ ತೆರಳುತ್ತಿದ್ದಾಗ ತುರ್ತು ಭೂಸ್ಪರ್ಶ ಮಾಡಿಲು ಹೋಗಿ ಅಪಘಾತ ಸಂಭವಿಸಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.  ವಿಮಾನವು  ಟ್ರಾನ್ಸ್ ಏಷ್ಯಾ ಸಂಸ್ಥೆಗೆ ಸೇರಿದ್ದಾಗಿದೆ. ವಿಮಾನದಲ್ಲಿದ್ದ ಏಳು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಮಾನ ಪತನಗೊಳ್ಳುತ್ತಿದ್ದಂತೆ ಭಾರೀ ಸ್ಫೋಟದ ಸದ್ದು ಕೇಳಿಬಂತೆಂದು ಸ್ಥಳೀಯರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ