ಆಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯ ಕೈವಶ ಮಾಡಿಕೊಂಡ ತಾಲಿಬಾನ್

ಗುರುವಾರ, 30 ಜುಲೈ 2015 (18:56 IST)
ಆಫ್ಘಾನಿಸ್ತಾನ ತಾಲಿಬಾನ್ ಸಂಘಟನೆಯು ಹೆಲ್ಮಾಂಡ್ ದಕ್ಷಿಣ ಪ್ರಾಂತ್ಯವನ್ನು ಮತ್ತೆ ಕೈವಶ ಮಾಡಿಕೊಂಡಿದೆ. ಈ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ಆಫ್ಘಾನಿಸ್ತಾನಕ್ಕೆ ನೆರವಾಗಿದ್ದ ವಿದೇಶಿ ಪಡೆಗಳು ಶ್ರಮಪಟ್ಟಿದ್ದರು. ಉಗ್ರಗಾಮಿಗಳ ವಿರುದ್ಧ ವಿದೇಶಿ ರಾಷ್ಟ್ರಗಳ ನೆರವಿಲ್ಲದೇ ಸ್ವಂತಬಲದಿಂದ ಹೋರಾಡುತ್ತಿರುವ ಆಫ್ಘನ್ ಸರ್ಕಾರಕ್ಕೆ ಇದು ತೀವ್ರ ಹಿನ್ನಡೆಯಾಗಿದೆ. 
 
ತಾಲಿಬಾನ್ ನಾಯಕ ಮುಲ್ಲಾ ಓಮರ್ ಎರಡು ವರ್ಷಗಳ ಕೆಳಗೇ ಮೃತನಾಗಿದ್ದಾಗಿ ಸರ್ಕಾರ ಪ್ರಕಟಿಸಿದ ಮಾರನೇ ದಿನವೇ ತಾಲಿಬಾನ್ ವಿರುದ್ಧ ಹೋರಾಟ ಸುದ್ದಿ ವರದಿಯಾಗಿದೆ. ಈಗ ನಮ್ಮ ಭದ್ರತಾ ಪಡೆಗಳು ಜಿಲ್ಲೆಯ ಹೊರವಲಯದಲ್ಲಿದ್ದು, ತಾಲಿಬಾನ್ ಜತೆ ಹೋರಾಡುತ್ತಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ವಕ್ತಾರ ಒಬೈದುಲ್ಲಾ ಒಬೇದ್ ಹೇಳಿದ್ದಾರೆ. 
 
ಒಬೈದ್ ಸಾವುನೋವಿನ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರೂ ರಾಯಿಟರ್ಸ್ ಜತೆ ಮಾತನಾಡಿದಾಗ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಉಗ್ರರ ಹೆಣಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದಾಗಿ ವರದಿ ಮಾಡಿವೆ. 
 
ಹೆಲ್ಮಾಂಡ್ ಪ್ರಾಂತ್ಯವು ತಾಲಿಬಾನ್ ಭದ್ರಕೋಟೆಯಾಗಿದ್ದು, ವರ್ಷಾನುಗಟ್ಟಲೆ ಅಪೀಮು ಉತ್ಪಾದನೆಯ ಕೇಂದ್ರವಾಗಿತ್ತು.  2006ರಲ್ಲಿ ಬ್ರಿಟಿಷ್ ಮತ್ತು ಅಮೆರಿಕ ಪಡೆಗಳು ಅದನ್ನು ಕೈವಶ ಮಾಡಿಕೊಳ್ಳಲು ಉಗ್ರಹೋರಾಟ ಮಾಡಿದ್ದವು. 

ವೆಬ್ದುನಿಯಾವನ್ನು ಓದಿ