ಬರಾಕ್ ಒಬಾಮಾ ಹತ್ಯೆಗೆ ಭಯೋತ್ಪಾದಕರ ಸಂಚು ಬಹಿರಂಗ

ಗುರುವಾರ, 19 ಮಾರ್ಚ್ 2015 (20:49 IST)
ಶ್ವೇತ ಭವನಕ್ಕೆ ವ್ಯಕ್ತಿಯೊಬ್ಬ ಸೈನೈಡ್‌ ತುಂಬಿದ ಲಕೋಟೆ ಯನ್ನು ಕಳುಹಿಸಿಕೊಟ್ಟಿದ್ದಾನೆ. ಇದೇ ವಿಳಾಸದಿಂದ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಹಿಂದೆಯೂ ಒಂದು ಲಕೋಟೆ ಬಂದಿತ್ತು. ಅದರಲ್ಲಿ ಮಲ ಮೂತ್ರ ತುಂಬಿಸಿ ಕಳುಹಿಸಲಾಗಿತ್ತು.

ಶ್ವೇತಭವನದ ಪತ್ರ ವಿಭಾಗಕ್ಕೆ ಇಂತಹುದೊಂದು ಪತ್ರ ಬಂದಿತ್ತು. ಆರಂಭದಲ್ಲಿ ಯಾವುದೇ ಶಂಕಾಸ್ಪದ ವಸ್ತು ಗೋಚರಿಸದಿದ್ದರೂ ಹೆಚ್ಚಿನ ತನಿಖೆಯಿಂದ ಅದರಲ್ಲಿ ಸೈನೈಡ್‌ ಇದ್ದುದು ಪತ್ತೆಯಾಯಿತು’ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.

ಈ ವಿಳಾಸದಿಂದ ಹಿಂದಿನಿಂದಲೂ ಅಧ್ಯಕ್ಷರ ನಿವಾಸಕ್ಕೆ ಲಕೋಟೆಗಳು ಬರು ತ್ತಿವೆ. 1995ರಲ್ಲಿ ಈತ ಮಲ ಮೂತ್ರ ತುಂಬಿದ ಪ್ಯಾಕೆಟನ್ನು ಕಳುಹಿಸಿದ್ದ. 2012 ರ ಜೂನ್‌ 12ರಂದು ಕಳುಹಿಸಿದ್ದ ಲಕೋಟೆಯಲ್ಲಿ ಸಣ್ಣ ಸಣ್ಣ ಮದ್ಯದ ಬಾಟಲಿಗಳಿದ್ದವು ಎಂದು ಅಂತರ್ಜಾಲ ಪತ್ರಿಕೆ ‘ದ ಇಂಟರ್‌ಸೆಪ್ಟ್‌’ ವರದಿ ಹೇಳಿದೆ.

ವೆಬ್ದುನಿಯಾವನ್ನು ಓದಿ