ನ್ಯೂಯಾರ್ಕ್ ವೈದ್ಯರೊಬ್ಬರಿಗೆ ಅಂಟಿದ ಎಬೋಲಾ ಕಾಯಿಲೆ

ಶುಕ್ರವಾರ, 24 ಅಕ್ಟೋಬರ್ 2014 (17:38 IST)
ಗೀನಿಯಾದ ಎಬೋಲಾ ರೋಗಿಗಳಿಗೆ ಚಿಕಿತ್ಸೆ ನೀಡಿ ನ್ಯೂಯಾರ್ಕ್‌ಗೆ ಹಿಂತಿರುಗಿದ ವೈದ್ಯರೊಬ್ಬರನ್ನು ಪರೀಕ್ಷೆಗೆ ಒಳಪಡಿಸಿದಾಗ ಎಬೋಲಾ ರೋಗದ ವೈರಸ್ ಪಾಸಿಟಿವ್ ಎಂಬ ಫಲಿತಾಂಶ ಬಂದಿದೆ.
 
ಕ್ರೈಗ್ ಸ್ಪೆನ್ಸರ್ ಎಂಬ 33 ವರ್ಷ ವಯಸ್ಸಿನ ವೈದ್ಯರು ಅಮೆರಿಕದ ದೊಡ್ಡ ನಗರಕ್ಕೆ ಜೆಎಫ್‌ಕೆ ವಿಮಾನನಿಲ್ದಾಣದಲ್ಲಿ ಅಕ್ಟೋಬರ್ 17ರಂದು ಬಂದಿಳಿದ ಕೂಡಲೇ ಜ್ವರ, ವಾಂತಿ, ನೋವು ಮತ್ತು ಸುಸ್ತು ಕಾಣಿಸಿಕೊಂಡಿತು. ಅವರನ್ನು ಪ್ರತ್ಯೇಕವಾಗಿ ಇರಿಸಿ ನ್ಯೂಯಾರ್ಕ್ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಅಮೆರಿಕದಲ್ಲಿ ಗುರುತಿಸಿದ ನಾಲ್ಕನೇ ಎಬೋಲಾ ರೋಗದ ಪ್ರಕರಣವಾಗಿದೆ ಮತ್ತು ಟೆಕ್ಸಾಸ್ ಹೊರಗೆ ಮೊದಲ ಪ್ರಕರಣವಾಗಿದೆ. ವಿಶ್ವದ ಮಾರಣಾಂತಿಕ ಎಬೋಲಾ ರೋಗ ಗಿನಿಯಾದ ಗ್ರಾಮವೊಂದರ 2 ವರ್ಷದ ಮಗುವಿಗೆ ಮೊಟ್ಟಮೊದಲು ಕಾಣಿಸಿಕೊಂಡಿತು.
 
ಬಾಲಕ ಅಜ್ಞಾತ ಕಾರಣಕ್ಕಾಗಿ 2013ರ ಡಿ. 6ರಂದು ಮೃತಪಟ್ಟಿದ್ದ. ಒಂದು ವಾರದ ನಂತರ ಮಗುವಿನ ತಾಯಿ ಡಿ. 6ರಂದು ಮೃತಪಟ್ಟರು. ಅವರ ಹಿಂದೇಯ 3 ವರ್ಷ ವಯಸ್ಸಿನ ಬಾಲಕನ ಸೋದರಿ ಮೃತಪಟ್ಟಿತು, ನಂತರ ಅಜ್ಜಿ ಕೂಡ ಮೃತಪಟ್ಟಿದ್ದರು. 
 
 2 ವರ್ಷದ ಮಗುವಿಗೆ ಬಾವಲಿಗಳ ಸಂಪರ್ಕದಿಂದ ಎಬೋಲಾ ಕಾಯಿಲೆ ಬಂದಿರಬಹುದೆಂದು ಭಾವಿಸಲಾಗಿದ್ದು, ದೃಢೀಕೃತ ವರದಿ ಮಾತ್ರ ಹೊರಬಿದ್ದಿಲ್ಲ. 

ವೆಬ್ದುನಿಯಾವನ್ನು ಓದಿ