ಧರ್ಮನಿಂದನೆ ಮಾಡಿದ ಗವರ್ನರ್ ಹಂತಕನಿಗೆ ಹುತಾತ್ಮನ ಗೌರವ

ಬುಧವಾರ, 2 ಮಾರ್ಚ್ 2016 (15:12 IST)
ಪಾಕಿಸ್ತಾನದಲ್ಲಿ ಜಾತ್ಯತೀತ ಗವರ್ನರ್ ಒಬ್ಬರನ್ನು ಹತ್ಯೆ ಮಾಡಿದ ಪೊಲೀಸ್ ಅಧಿಕಾರಿಯ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗಿದರು. ಮರಣದಂಡನೆಗೆ ಗುರಿಯಾದ ಪೊಲೀಸ್ ಅಧಿಕಾರಿಯನ್ನು ಹುತಾತ್ಮನಂತೆ  ಜನರು ಕಂಡರು. ಧರ್ಮನಿಂದನೆಯ ಆರೋಪಗಳ ಮೇಲೆ ಪೊಲೀಸ್ ಅಧಿಕಾರಿಯು ಗವರ್ನರ್‌ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗೆ ಮರಣದಂಡನೆ ಶಿಕ್ಷೆಗೆ ನಿನ್ನೆ ಗುರಿಮಾಡಲಾಗಿತ್ತು.  
 
ದೇಶದಲ್ಲಿ ಕಠಿಣ ಧರ್ಮನಿಂದನೆಯ ವಿರುದ್ಧ ಕಾನೂನುಗಳಿಗೆ ಸುಧಾರಣೆ ಮಾಡಬೇಕೆಂದು ಗವರ್ನರ್ ಸಲ್ಮಾನ್ ತಸೀರ್ ಕರೆ ನೀಡಿದ್ದರು. ಮತ್ತು ಇಸ್ಲಾಂ ಪವಿತ್ರಗ್ರಂಥ ಖುರಾನ್ ವಿರೂಪಗೊಳಿಸಿದ್ದಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾದ ಕ್ರೈಸ್ತ ಮಹಿಳೆಯನ್ನು ತಸೀರ್ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಧರ್ಮನಿಂದನೆ ಆರೋಪದ ಮೇಲೆ  ಪೊಲೀಸ್ ಅಧಿಕಾರಿ ಮಮ್ತಾಜ್ ಖಾದ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದರು . ಪಾಕಿಸ್ತಾನದಲ್ಲಿ ಧರ್ಮಾಂಧತೆ ಆಳವಾಗಿ ಬೇರು ಬಿಟ್ಟಿರುವುದಕ್ಕೆ ಇದು ಸಾಕ್ಷಿಯೊದಗಿಸಿದೆ.    ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಹಿಂಸಾಚಾರ ಸಂಭವಿಸುವ ಮುನ್ನೆಚ್ಚರಿಕೆಯಿಂದ ಅಧಿಕಾರಿಗಳು ಎಲ್ಲಾ ಶಾಲೆಗಳನ್ನು ಮುಚ್ಚಿದ್ದರು .
 
 ಖಾದ್ರಿಯ ಶವದ ಮೆರವಣಿಗೆ ಸಾಗುತ್ತಿದ್ದರಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಗುಲಾಬಿ ದಳಗಳನ್ನು ಆಂಬ್ಯುಲೆನ್ಸ್‌ನತ್ತ ತೂರಿದರು. ಇಸ್ಲಮಾಬಾದ್‌ನಲ್ಲಿ ಸಮಾಧಿ ಮಾಡುವ ಮುಂಚೆ ಹುತಾತ್ಮರಿಗೆ ನೀಡುವ ಗೌರವ ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

 ಇದಕ್ಕೆ ಮುಂಚೆ ಅಧಿಕಾರಿಗಳು ಸ್ಥಳೀಯ ಮಾಧ್ಯಮದ ಮೇಲೆ ನಿಷೇಧಾಜ್ಞೆ ವಿಧಿಸಿ, ಉಗ್ರವಾದವನ್ನು ವೈಭವೀಕರಿಸಿ ವರದಿ ಮಾಡಿದರೆ ಬಾಗಿಲು ಮುಚ್ಚಿಸುವುದಾಗಿ ಎಚ್ಚರಿಸಿದ್ದರು.   ಖಾದ್ರಿ ಅವರ ಗಲ್ಲುಶಿಕ್ಷೆಯಿಂದ ಪಾಕಿಸ್ತಾನದ ಅನೇಕ ನಗರಗಳಲ್ಲಿ ಬೀದಿ ಪ್ರತಿಭಟನೆ ಗಳು ನಡೆದವು. ಅವರ ಕ್ರಮವನ್ನು ಅನೇಕ ಧಾರ್ಮಿಕ ಮುಖಂಡರು, ಉಗ್ರ ಸಂಘಟನೆಗಳು ಸಮರ್ಥಿಸಿಕೊಂಡಿದ್ದವು. 
 

ವೆಬ್ದುನಿಯಾವನ್ನು ಓದಿ