ಕಪ್ಪೆ ಸತ್ತಿದ್ದಕ್ಕೆ ಇನ್ವೆಸ್ಟಿಗೇಷನ್

ಗುರುವಾರ, 20 ಅಕ್ಟೋಬರ್ 2016 (18:13 IST)
ಪೆರು: ಇಲ್ಲಿನ ಕೋಟಾ ನದಿಯಲ್ಲಿ 10 ಸಾವಿರಕ್ಕೂ ಅಧಿಕ ಕಪ್ಪೆಗಳು ಮೃತಪಟ್ಟಿವೆ.  ಮಾಲಿನ್ಯದಿಂದ ಈ ಜಲಚರ ಸತ್ತಿವೆಯಾ, ಅಥವಾ ವಿಷಪೂರಿತ ಆಹಾರ ಸೇವನೆಯಿಂದ ಸತ್ತಿವೆಯಾ ಎಂದು ಪತ್ತೆ ಮಾಡಲು ಎನ್ವಿರಾನ್ಮೆಂಟಲ್ ಏಜೆನ್ಸಿ ತನಿಖೆ ಆರಂಭಿಸಿದೆ.
ಕಪ್ಪೆಗಳ ಮಾರಣ ಹೋಮ ಕಂಡು ಸ್ಥಳಿಯರು ಈ ಬಗ್ಗೆ ಹಲವು ಕ್ಯಾಂಪೇನ್ ಮಾಡುವ ಮೂಲಕ ಏಜೆನ್ಸಿಗೆ ಮನವಿ ಮಾಡಿದ್ದರು. ಅಲ್ಲದೇ ಜಲಮಾಲಿನ್ಯದಿಂದಲೇ ಕಪ್ಪೆಗಳು ಸತ್ತಿವೆ ಅಂತಾ ಆರೋಪಿಸಿ ತನಿಖೆಗೆ ಆಗ್ರಹಿಸಿದ್ರು.

 
ಇದಕ್ಕೆ ಸಂಬಂಧಪಟ್ಟಂತೆ ನದಿಗೆ ಯಾವುದೋ ಮಲಿನ ಸೇರುತ್ತಿದೆ. ಈ ಬಗ್ಗೆ ಶೀಘ್ರ ಕ್ರಮಕ್ಕೆ ಮುಂದಾಗುವಂತೆ ಕೆಲ ಸಂಘಟನೆಗಳು ಸತ್ತ 100ಕ್ಕೂ ಅಧಿಕ ಕಪ್ಪೆಗಳನ್ನು ಹಿಡಿದು ಪೆರು ರಾಜಧಾನಿ ಪುನೋನ ಆಡಳಿತ ಭವನದೆದುರು ಪ್ರತಿಭಟನೆ ಮಾಡಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದರು. 
 
ಈ ಬಗ್ಗೆ ಚರ್ಚೆ ನಡೆದು ಕೊನೆಗೂ ರಾಷ್ಟ್ರೀಯ ಅರಣ್ಯ ಪ್ರಾಣಿ ರಕ್ಷಣಾ ಸಮಿತಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಕೋರಿದ್ದಾರೆ.
 
ಹೀಗೆ ತನಿಖೆ ಮುಂದುವರೆದಾಗ 50 ಕಿಮಿ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಅಧಿಕ ಕಪ್ಪೆಗಳು ಸತ್ತಿರುವುದು ಪತ್ತೆಯಾಗಿದೆ. ಕೋಟಾ ನದಿಗೆ ಟಿಟಿಕಾಕಾ ನದಿ ನೀರು ಹರಿಬಿಟ್ಟಾಗ ಈ ರೀತಿಯ ದುರ್ಘಟನೆ ಸಂಭವಿಸಿದೆ. ಜೊತೆಗೆ ನೀರಿನ ಮಟ್ಟ ಹೆಚ್ಚಾದಾಗ, ಕಪ್ಪೆಗಳಿಗೆ ಆಮ್ಲಜನಕದ ಕೊರತೆ ಉಂಟಾಗಿದೆ. ಇದೇ ಕಾರಣಕ್ಕೆ ಸಾವನ್ನಪ್ಪಿವೆ ಎಂದು ತಜ್ಞರ ತಂಡ ವರದಿ ನೀಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ