ಪಾಕಿಸ್ತಾನದ 24 ಸಾವಿರ ಮದರಸಾಗಳಿಗೆ ಸೌದಿ ಅರೇಬಿಯಾದಿಂದ ಹಣದ ಹೊಳೆ

ಶನಿವಾರ, 30 ಜನವರಿ 2016 (20:13 IST)
ಪರೋಕ್ಷವಾಗಿ ಅಸಹಿಷ್ಣುತೆ ಹೆಚ್ಚಿಸಲು ಸೌದಿ ಅರೇಬಿಯಾ ಪಾಕಿಸ್ತಾನದ 24 ಸಾವಿರ ಮದರಸಾಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವುದನ್ನು ತಡೆಯಬೇಕು ಎಂದು ಅಮೆರಿಕ ಸಂಸದರು ಸರಕಾರವನ್ನು ಒತ್ತಾಯಿಸಿದ್ದಾರೆ.
 
ಸಂಸದ ಕ್ರಿಸ್ ಮರ್ಫಿ ಮಾತನಾಡಿ, ದ್ವೇಷ ಮತ್ತು ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿರುವ ಪಾಕಿಸ್ತಾನದ ಮದರಸಾಗಳಿಗೆ ಸೌದಿ ಅರೇಬಿಯಾ ಹಣಕಾಸಿನ ಬೆಂಬಲ ನೀಡುತ್ತಿರುವುದು ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.  
 
ಕಳೆದ 1956ರಲ್ಲಿ ಪಾಕಿಸ್ತಾನದಲ್ಲಿ 244 ಮದರಸಾಗಳಿದ್ದವು. ಇಂದು 24 ಸಾವಿರ ಮದರಸಾಗಳಿವೆ. ಮದರಸಾಗಳಲ್ಲಿ ಇತರ ಧರ್ಮಗಳ ವಿರುದ್ಧ ದ್ವೇಷ ಮತ್ತು ಜಿಹಾದಿಗಾಗಿ ಭಯೋತ್ಪಾದನೆಯಲ್ಲಿ ತೊಡಗುವಂತೆ ಮುಗ್ದ ಮಕ್ಕಳಿಗೆ ತರಬೇತಿ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ವಿದೇಶಾಂಗ ವ್ಯವಹಾರಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಮರ್ಫಿ, ಸೌದಿ ಅರೇಬಿಯಾ ಮದರಸಾಗಳಿಗೆ ನೀಡುತ್ತಿರುವ ಆರ್ಥಿಕ ಅನುದಾನವನ್ನು ತಡೆಯುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಒಬಾಮಾ ಸರಕಾರಕ್ಕೆ ಒತ್ತಾಯಿಸಿದ್ದಾರೆ. 
 
ಒಂದು ಅಂದಾಜಿನ ಪ್ರಕಾರ, 1960 ರಿಂದ ಸೌದಿ ಅರೇಬಿಯಾ ವಾರ್ಷಿಕವಾಗಿ ಪಾಕಿಸ್ತಾನದ ಮದರಸಾಗಳು ಮತ್ತು ಮಸೀದಿಗಳಿಗೆ ಇಸ್ಲಾಂ ಸಂದೇಶ ಹರಡಲು 100 ಬಿಲಿಯನ್ ಡಾಲರ್ ಆರ್ಥಿಕ ಅನುದಾನ ನೀಡಿದೆ ಎಂದು ಮೂಲಗಳು ತಿಳಿಸಿವೆ. 
 
ಸಂಶೋಧಕರ ಒಂದು ಹೋಲಿಕೆಯ ಪ್ರಕಾರ, ರಷ್ಯಾ ಕಮ್ಯೂನಿಷ್ಠ ಸಿದ್ದಾಂತವನ್ನು ಹರಡಲು 1920 ರಿಂದ 1991ರ ವರೆಗೆ 7 ಬಿಲಿಯನ್ ಡಾಲರ್ ಆರ್ಥಿಕ ಅನುದಾನ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ವೆಬ್ದುನಿಯಾವನ್ನು ಓದಿ