ಭಾರತೀಯ ಯುವಕನ ಮೇಲೆ ಪಾಕಿಗಳಿಂದ ಸಾಮೂಹಿಕ ಅತ್ಯಾಚಾರ

ಶನಿವಾರ, 28 ಮಾರ್ಚ್ 2015 (12:08 IST)
ಭಾರತ ಮೂಲದ ಯುವಕನೊಬ್ಬನ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನೆದುರಿಸುತ್ತಿದ್ದ ಇಬ್ಬರು ಪಾಕಿಸ್ತಾನಿಗಳನ್ನು ದುಬೈನ ನ್ಯಾಯಾಲಯವೊಂದು ಅಪರಾಧಿಗಳೆಂದು ಘೋಷಿಸಿದೆ. 

ತಂಪುಪಾನೀಯದಲ್ಲಿ ಮದ್ಯವನ್ನು ಬೆರೆಸಿ ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು 20 ವರ್ಷ ಪ್ರಾಯದ ಭಾರತೀಯ ಯುವಕ ದೂರು ನೀಡಿದ್ದ. ಘಟನೆ ಸಪ್ಟಂಬರ್ ತಿಂಗಳಲ್ಲಿ ನಡೆದಿತ್ತು. 
 
"ಆರೋಪಿಗಳಲ್ಲಿ ಒಬ್ಬ ನನಗೆ ಆಲ್ಕೋಹಾಲ್ ಮಿಶ್ರಿತ ತಂಪು ಪಾನೀಯ ಕುಡಿಸಿದ. ಅದನ್ನು ಕುಡಿದು ಅರೆ ಪ್ರಜ್ಞೆಗೆ ಜಾರಿದ ನನ್ನ ಮೇಲೆ ಇಬ್ಬರು ಸೇರಿ ಅತ್ಯಾಚಾರ ನಡೆಸಿದರು. ನನ್ನ ಮೇಲೆ ಹಲ್ಲೆಯೂ ನಡೆಸಿದ ಅವರು ವಾಷ್ ರೂಮ್‌ಲ್ಲಿ ನೂಕಿ ಬಿಸಿನೀರನ್ನು ತೋಕಿದರು. ಅಲ್ಲಿಂದ ಮೇಲೇಳಲು ನನ್ನ ಸ್ನೇಹಿತ ನನಗೆ ಸಹಾಯ ಮಾಡಿದ", ಎಂದು ಪೀಡಿತ ತನ್ನ ದೂರಿನಲ್ಲಿ ಹೇಳಿದ್ದ.
 
ತಮ್ಮ ಕುಕೃತ್ಯದ ಬಗ್ಗೆ ಕಿಂಚಿತ್ ಪಶ್ಚಾತಾಪವನ್ನು ಕೂಡ ವ್ಯಕ್ತಪಡಿಸದ ಆರೋಪಿಗಳಲ್ಲಿ ಒಬ್ಬ ಲೈಂಗಿಕ ಕೃತ್ಯಕ್ಕೆ ಆತನ ಸಹಮತಿ ಸಹ ಇತ್ತು ಎಂದರೆ, ಇನ್ನೊಬ್ಬ ತಾವು ಮದ್ಯ ಬೆರೆಸಿ ಕೊಟ್ಟಿದ್ದು ಹೌದು, ಆದರೆ ಅತ್ಯಾಚಾರ ನಡೆಸಿಲ್ಲ ಎಂದು ವಾದಿಸುತ್ತಿದ್ದಾನೆ. 

ವೆಬ್ದುನಿಯಾವನ್ನು ಓದಿ