ಬಾಲಕಿಯರ ತುಂಡುಲಂಗಕ್ಕೆ ನಿಷೇಧ ಹೇರಿದ ಮುಖ್ಯಶಿಕ್ಷಕಿ

ಶನಿವಾರ, 4 ಜುಲೈ 2015 (18:55 IST)
ಯುಕೆಯ ವೆಸ್ಟ್ ಮಿಡ್ ಲ್ಯಾಂಡ್ಸ್ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಬ್ಲೆಂಕೋವ್ ವಿದ್ಯಾರ್ಥಿನಿಯರು ತುಂಡುಲಂಗ ಉಡುವುದಕ್ಕೆ ನಿಷೇಧ ವಿಧಿಸಿದ್ದಾರೆ. ಇದರಿಂದ ಪುರುಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮನಸ್ಸನ್ನು ಗಲಿಬಿಲಿಗೊಳಿಸುತ್ತದೆ ಎಂದು ಅವರು ಭಾವಿಸಿದ್ದಾರೆ.

ಸ್ಟಾಫೋರ್ಡ್‌ಶೈರ್‌ನಲ್ಲಿರುವ ಟ್ರೆಂತಾಮ್ ಹೈಸ್ಕೂಲ್‌ನ ರೊವೆನಾ ಬ್ಲೆಂಕೋವ್ ಈ ಕ್ರಮವನ್ನು ಕೈಗೊಂಡಿರುವುದು ಏಕೆಂದರೆ, ತಮ್ಮ ಕಾಲನ್ನು ಅತಿಯಾಗಿ ತೋರಿಸುತ್ತ ಹಿಂಭಾಗವನ್ನು ಮಾತ್ರ ಮುಚ್ಚುವಷ್ಟು ಸ್ಕರ್ಟ್ ಧರಿಸುತ್ತಿದ್ದ ವಿದ್ಯಾರ್ಥಿನಿಯರಿಗೆ ಛೀಮಾರಿ ಹಾಕಿ ಹಾಕಿ ರೋಸಿಹೋಗಿದ್ದರು. 
 
 ಇದರ ಫಲವಾಗಿ ಎಲ್ಲಾ ವಿದ್ಯಾರ್ಥಿಗಳು 2015 ಸೆಪ್ಟೆಂಬರ್‌ನಿಂದ ಪ್ಯಾಂಟ್‌ಗಳನ್ನು ಧರಿಸಿಕೊಂಡು ಶಾಲೆಗೆ ಬರಬೇಕೆಂದು ಕಟ್ಟಪ್ಪಣೆ ನೀಡಿದ್ದಾರೆ. 9 , 10 ಮತ್ತು 11ನೇ ವಯಸ್ಸಿನ ಬಾಲಕಿಯರಲ್ಲಿ ಈ ಸಮಸ್ಯೆ ಕಳೆದ 2 ವರ್ಷಗಳಿಂದ ಹೆಚ್ಚಾಗುತ್ತಲೇ ಇತ್ತು. 7 ಮತ್ತು 8ನೇ ವಯಸ್ಸಿನ ಬಾಲಕಿಯರು ನಿಯಮ ಪಾಲಿಸುತ್ತಿದ್ದರು.

ಆದರೆ ಅವರು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಸ್ಕರ್ಟ್ ಚಿಕ್ಕದಾಗುತ್ತಾ ಹೋಗುತ್ತದೆ ಎಂದು ಬ್ಲೆಂಕೋವ್ ಹೇಳಿದರು. ಬಾಲಕಿಯರು ತುಂಡುಲಂಗ ಧರಿಸಿ ಬರುತ್ತಿದ್ದರಿಂದ ಮೆಟ್ಟಲು ಹತ್ತುವಾಗ ಮತ್ತು ಕುಳಿತುಕೊಳ್ಳುವಾಗ  ಪುರುಷ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಗಮನ ಬೇರೆಡೆ ಸೆಳೆಯುತ್ತಿತ್ತು ಎಂದು ಬ್ಲೆಂಕೋವ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ