ಇದು ಹಲ್ಲು ಕೀಳುವ ವಿಲಕ್ಷಣ ವಿಧಾನ ! ( ವಿಡಿಯೋ ನೋಡಿ)

ಗುರುವಾರ, 9 ಏಪ್ರಿಲ್ 2015 (16:15 IST)
ಅಲ್ಲಾಡುತ್ತಿದ್ದ ಮಗನ ಹಲ್ಲು ಕೀಳಲು ಅಮೇರಿಕಾದ ವ್ಯಕ್ತಿಯೊಬ್ಬ ವಿಲಕ್ಷಣ ವಿಧಾನವನ್ನು ಅನುಸರಿಸಿದ್ದಾನೆ. ಆ ಹಲ್ಲಿಗೆ ಒಂದು ದಾರವನ್ನು ಕಟ್ಟಿ ಅದನ್ನು ಕಾರ್ ಹಿಂಭಾಗಕ್ಕೆ ಕಟ್ಟಿ ಕಾರ್ ಚಲಾಯಿಸಿದ್ದಾನೆ. 

ಫ್ಲೋರಿಡಾದ ನಿವಾಸಿ ರಾಬರ್ಟ್ ಅಬೆರ್ಕ್ರೋಮ್ಬೀ ತನ್ನ ಮಗನ ಬಾಯಿಗೆ ಮತ್ತು ಕಾರ್ ನಡುವೆ ದಾರವನ್ನು ಕಟ್ಟಿ ಕಾರ್ ಚಲಾಯಿಸಿದ ತಕ್ಷಣ ಹಲ್ಲು ಕಿತ್ತು ಬರುವ ದೃಶ್ಯವೀಗ ಅಂತರ್ಜಾಲದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. 
 
ಅಪ್ಪನ ತಂತ್ರದಿಂದ ಹಲವು ದಿನಗಳಿಂದ ಬೀಳದೇ ಕಾಡುತ್ತಿದ್ದ ಹಲ್ಲು ಥಟಕ್ಕನೇ ಹೊರಬಿದ್ದಿದೆ. ಹುಡುಗ "ಇದು ಹೊರಬಿತ್ತು" ("It came out!") ಎಂದು ಆನಂದದಿಂದ ಕಿರುಚುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 
 
ವೃತ್ತಿಪರ ಕುಸ್ತಿಪಟು ಆಗಿರುವ ಅಬೆರ್ಕ್ರೋಮ್ಬೀ, ಈ ವೀಡಿಯೊದ ಜನಪ್ರಿಯತೆಯಿಂದ ಆಶ್ಚರ್ಯ ಚಕಿತರಾಗಿದ್ದಾರೆ.

ಇದು ಹಲ್ಲು ಕೀಳುವ ವಿಲಕ್ಷಣ ವಿಧಾನ ! ( ವಿಡಿಯೋ ನೋಡಿ)

ವೆಬ್ದುನಿಯಾವನ್ನು ಓದಿ