ಆರ್‌ಎಸ್‌ಎಸ್‌ ಭಯೋತ್ಪಾದಕ ಸಂಘಟನೆ ಅಲ್ಲ ಎಂದ ಅಮೇರಿಕ

ಗುರುವಾರ, 26 ಮಾರ್ಚ್ 2015 (11:54 IST)
ರಾಷ್ಟ್ರೀಯವಾದಿ ಹಿಂದೂ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು  ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲು ಅಮೇರಿಕಾದ ನ್ಯಾಯಾಲಯವೊಂದು ನಿರ್ಧರಿಸಿದೆ.
 
'ಬಲಪಂಥೀಯ ತತ್ವಗಳಲ್ಲಿ ವಿಶ್ವಾಸ ಹೊಂದಿರುವ ಆರ್‌ಎಸ್‌ಎಸ್‌  ಜಾತ್ಯಾತೀತ ರಾಷ್ಟ್ರವಾದ ಭಾರತವನ್ನು ಹಿಂದೂದೇಶವನ್ನಾಗಿ ಪರಿವರ್ತಿಸುವ ಇರಾದೆ ಹೊಂದಿದ್ದು, ಕೋಮು ಸೌಹಾರ್ದತೆಯನ್ನು ಕೆಡಿಸುವಂತಹ ಚಟುವಟಿಕೆಗಳಲ್ಲಿ ತೊಡಗಿದೆ. ಹಿಂಸಾತ್ಮಕ ಮಾರ್ಗವನ್ನು ಅನುಸರಿಸುತ್ತಿದೆ. ಆದ್ದರಿಂದ ಅದನ್ನು "ಉಗ್ರ ಸಂಘಟನೆ'' ಎಂದು ಘೋಷಿಸುವಂತೆ ಕೋರಿ ಸಿಖ್‌ ಫಾರ್ ಜಸ್ಟೀಸ್ ಸಂಘಟನೆ ನ್ಯೂಯಾರ್ಕ್‌ನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. 

ಆದರೆ ಈ ದಾವೆಯನ್ನು ಮುಂದುವರಿಸುವ ಬದಲಿಗೆ ವಜಾಗೊಳಿಸಲು ಅಮೆರಿಕ ಸರಕಾರ ಬಯಸಿದ್ದು ಅರ್ಜಿಯನ್ನು ವಜಾ ಮಾಡುವಂತೆ ಅಲ್ಲಿನ ನ್ಯಾಯಾಲಯಕ್ಕೆ ಅಮೆರಿಕ ಸರಕಾರದ ವಿದೇಶಾಂಗ ಸಚಿವ ಜಾನ್ ಕೆರ್ರಿ ಕೋರಿದ್ದರು. 
 
ಸರಕಾರದ ಕೋರಿಕೆಯನ್ನು ಪರಿಗಣಿಸಿ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ