ಭಾರತ ಮತ್ತು ಕೆಲವು ಅಮೆರಿಕದ ಸಂಸದರ ತೀವ್ರ ವಿರೋಧದ ನಡುವೆ ಒಬಾಮಾ ಆಡಳಿತ ಹಿಡಿದ ಪಟ್ಟನ್ನು ಬಿಡದೇ ಪಾಕಿಸ್ತಾನಕ್ಕೆ 8 ಎಫ್-16 ಯುದ್ಧವಿಮಾನಗಳನ್ನು ಮಾರಾಟ ಮಾಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. 8 ಎಫ್-16 ವಿಮಾನಗಳನ್ನು ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಮತ್ತು ಬಂಡುಕೋರ ನಿಗ್ರಹ ಕಾರ್ಯಾಚರಣೆಗೆ ನೆರವಾಗುವುದಕ್ಕೆ ಮಾರಾಟ ಮಾಡುತ್ತಿರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ಹೆಲೆನಾ ಡಬ್ಲ್ಯು ವೈಟ್ ತಿಳಿಸಿದರು.
ಭಾರತ ಮತ್ತು ಅಮೆರಿಕದ ಕೆಲವು ಸಂಸದರು ಈ ಮಾರಾಟಕ್ಕೆ ತೀವ್ರ ವಿರೋಧ ಸೂಚಿಸಿ, ಇಂತಹ ಕಾರ್ಯಾಚರಣೆಗೆ ಎಫ್-16 ವಿಮಾನಗಳು ಉಪಯುಕ್ತವಲ್ಲ, ಅಂತಿಮವಾಗಿ ಅದನ್ನು ಭಾರತದ ವಿರುದ್ಧ ಬಳಸುವ ಸಾಧ್ಯತೆ ಕುರಿತು ಕಳವಳ ವ್ಯಕ್ತಪಡಿಸಿದ್ದರು.