ನಮ್ಮ ಜಲಸೀಮೆಯೊಳಗೆ ಬಂದ್ರೆ ಗುಂಡಿಕ್ಕುತ್ತೇವೆ: ಭಾರತೀಯ ಮೀನುಗಾರರಿಗೆ ವಿಕ್ರಮಸಿಂಘೆ ಬೆದರಿಕೆ

ಶನಿವಾರ, 7 ಮಾರ್ಚ್ 2015 (13:12 IST)
ನಿಮ್ಮ ಜಲಸೀಮೆಯಲ್ಲೇ ಇರಿ, ನಮ್ಮ ಜಲಸೀಮೆಯೊಳಗೆ ಬಂದರೆ ಗುಂಡಿಕ್ಕಿ ಕೊಲ್ಲುವುದಾಗಿ ಶ್ರೀಲಂಕಾ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಭಾರತೀಯ ಮೀನುಗಾರರಿಗೆ ಎಚ್ಚರಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಭೇಟಿ ಇನ್ನು ಒಂದು ವಾರ ಬಾಕಿ ಉಳಿದಿರುವಂತೆ ವಿಕ್ರಮಸಿಂಘೆ ಈ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. 
 
 ಯಾರಾದರೂ ನನ್ನ ಮನೆಯೊಳಗೆ ನುಗ್ಗಿದರೆ ನಾನು ಶೂಟ್ ಮಾಡುತ್ತೇನೆ.  ಅದೇ ರೀತಿ ನಮ್ಮ ಜಲಸೀಮೆಯೊಳಗೆ ಕಾಲಿಟ್ಟರೂ ಶೂಟ್ ಮಾಡುತ್ತೇವೆ.  ನಮ್ಮ ಜಲಪ್ರದೇಶಕ್ಕೆ ಯಾಕೆ ಬರುತ್ತೀರಿ, ನಮ್ಮ ಜಲಸೀಮೆಯಲ್ಲಿ ಮೀನು ಹಿಡಿಯುವುದು ಏತಕ್ಕೆ , ನಿಮ್ಮ ಸೀಮೆಯೊಳಗೇ ಇದ್ದರೆ ಯಾವುದೇ ವಿವಾದವಿಲ್ಲ ಎಂದು ಹೇಳಿದರು.
 
ವಿಕ್ರಮ ಸಿಂಘೆ ಹೇಳಿಕೆಯಿಂದ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.  ಈ ವಿಷಯವನ್ನು ನಿಯೋಗ ಮಟ್ಟದ ಮಾತುಕತೆಯಲ್ಲಿ ಭಾರತ ಪ್ರಸ್ತಾಪಿಸುತ್ತದೆಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಭಾರತ ಮತ್ತು ಶ್ರೀಲಂಕಾ ಇದನ್ನು ಮಾನವೀಯ ನೆಲೆಯಲ್ಲಿ ಕಾಣಲು ಪ್ರಯತ್ನಿಸುತ್ತಿದೆ.

ಇದನ್ನು ನಾವು ಸ್ನೇಹಿತರಾಗಿ ಮತ್ತು ನೆರೆಹೊರೆಯ ರಾಷ್ಟ್ರಗಳಾಗಿ ಬಗೆಹರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದರು. ಸುಷ್ಮಾ ಸ್ವರಾಜ್ ಶ್ರೀಲಂಕಾಗೆ ಭೇಟಿ ನೀಡಿದ್ದು, ಈ ವಿಷಯವನ್ನು ವಿಕ್ರಮೆ ಸಿಂಗ್ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ