20 ವರ್ಷಗಳ ಬಳಿಕ; ಅತ್ಯಾಚಾರ ಮತ್ತು ಸಮನ್ವಯದ ಕಥೆ

ಮಂಗಳವಾರ, 14 ಫೆಬ್ರವರಿ 2017 (11:50 IST)
ಪ್ರೀತಿಪ್ರೇಮದ ನೆಪದಲ್ಲಿ ಹತ್ತಿರವಾಗಿ ಬಳಿಕ ಅತ್ಯಾಚಾರಗೈದು ಪರಾರಿಯಾಗಿದ್ದ ಯುವಕನನ್ನು ಬರೊಬ್ಬರಿ 20 ವರ್ಷಗಳ ಬಳಿಕ ಪತ್ತೆ ಹಚ್ಚಿದ ಮಹಿಳೆ ಆತನ ಜತೆ ಸೇರಿ ಪುಸ್ತಕ ಬರೆದ ವಿಲಕ್ಷಣ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಥೊರ್ಡಿಸ್ ಇಲ್ವಾ ಎಂಬ ಹುಡುಗಿಯೇ ಈ ಅಪರೂಪದ ಕಥೆಗೆ ನಾಯಕಿ. ಇಲ್ವಾಗೆ 16 ವರ್ಷವಾಗಿದ್ದಾಗ ತನ್ನ ಹೈಸ್ಕೂಲ್ ಗೆಳೆಯ ಸ್ಟ್ರೇಂಚರ್‌ನ‌ನೊಂದಿಗೆ ಪ್ರಥಮ ನೋಟದಲ್ಲಿ ಪ್ರೇಮಪಾಶಕ್ಕೆ ಸಿಲುಕಿದ್ದಳು. ಕ್ರಿಸ್ಮಸ್ ಸಂದರ್ಭದಲ್ಲೊಮ್ಮೆ ಆತನೊಂದಿಗೆ ನೃತ್ಯ ಮಾಡುತ್ತಿದ್ದಾಗ ವಿಪರೀತ ರಮ್ ಕುಡಿದಿದ್ದ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಆಕೆಯ ಈ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ 18 ವರ್ಷದ ಪ್ರಿಯತಮ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಳಿಕ ನಾಪತ್ತೆಯಾಗಿದ್ದಾನೆ.
 
ಇದರಿಂದ ಸಾಮಾಜಿಕ ಶೋಷಣೆಗೊಳಗಾದ ಯುವತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಆದರೆ ಕೆಲ ಕಾಲದ ಬಳಿಕ ಸಾವರಿಸಿಕೊಂಡು ಎದ್ದು ನಿಂತು ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಟಕ್ಕೆ ನಿಂತಿದ್ದಾಳೆ.
 
ಬಳಿಕ ತನ್ನ ಮೇಲೆ ಅತ್ಯಾಚಾರಗೈದ ಯುವಕನ ಪತ್ತೆ ಕಾರ್ಯಕ್ಕೆ ಮುಂದಾಗ ಆಕೆ ಅದರಲ್ಲಿ ಯಶಸ್ಸನ್ನು ಕೂಡ ಕಾಣುತ್ತಾಳೆ. ಘಟನೆ ನಡೆದ ಬರೊಬ್ಬರಿ 20 ವರ್ಷಗಳ ಬಳಿಕ ಕೇಪ್‌ಟೌನ್‌ನಲ್ಲಿ ಇಬ್ಬರು ಭೇಟಿಯಾಗಿದ್ದಾರೆ.  ಆ ಸಂದರ್ಭದಲ್ಲಿ ಸ್ಟ್ರೇಂಚರ್‌ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ.  ಹೀಗೆ ಅವಮಾನ, ನೋವು, ಹತಾಶೆ, ಒಪ್ಪಿಗೆ ಇತ್ಯಾದಿಗಳ ಬಗ್ಗೆ ಪ್ರಬಲ ಚರ್ಚೆಯಾಗಿ ಬಳಿಕ ಇಬ್ಬರು ಸೇರಿ ಅತ್ಯಾಚಾರ ಸಂತ್ರಸ್ತರಿಗಾಗಿ ಶ್ರಮಿಸುವ ನಿರ್ಧಾರಕ್ಕೆ ಬಂದಿದ್ದಾರೆ.
 
 
ಬಳಿಕ ಕ್ಷಮಾಶೀಲತೆಯನ್ನು ವಿಷಯವನ್ನಾಗಿಟ್ಟುಕೊಂಡು“Our story of rape and reconciliation” (ಅತ್ಯಾಚಾರ ಮತ್ತು ಸಮನ್ವಯದ ನಮ್ಮ ಕಥೆ) ಎಂಬ ಪುಸ್ತಕವನ್ನು ಬರೆದಿದ್ದಾರೆ. 
 
 
 

ವೆಬ್ದುನಿಯಾವನ್ನು ಓದಿ