ನಿದ್ದೆಯಲ್ಲಿದ್ದ ಪತ್ನಿಯ ಮೇಲೆ 300 ಕ್ಕೂ ಹೆಚ್ಚು ಬಾರಿ ಅತ್ಯಾಚಾರ!

ಮಂಗಳವಾರ, 20 ಜನವರಿ 2015 (13:04 IST)
ಇದೊಂದು ವಿಲಕ್ಷಣ ಪ್ರಸಂಗ. ತಾನು ನಿದ್ದೆಯಲ್ಲಿದ್ದಾಗ ಗಂಡ ತನ್ನ ಮೇಲೆ 300 ಕ್ಕೂ ಹೆಚ್ಚು ಬಾರಿ ಅತ್ಯಾಚಾರ ಮಾಡಿದ್ದಾನೆ ಮತ್ತು ಈ ಕೃತ್ಯದ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ ಎಂದು 26 ವರ್ಷದ ಮಹಿಳೆಯೊಬ್ಬಳು ಕೋರ್ಟ್ ಮೆಟ್ಟಿಲೇರಿದ ಕತೆ ಇದು. 
ಇದು ನಡೆದಿರುವುದು ಇಂಗ್ಲೆಂಡ್‌ನಲ್ಲಿ. ಸಾರಾ ಟೆಟಿ ಎಂಬ ಮಹಿಳೆಯೇ ತನ್ನ ಗಂಡನ ವಿರುದ್ಧ ಅತ್ಯಾಚಾರ ನಡೆಸಿದ ದೂರು ದಾಖಲಿಸಿರುವುದು. "ಪ್ರತಿದಿನ ಎಚ್ಚರವಾದಾಗ  ತಲೆ ಭಾರವಾದಂತೆ ಭಾಸವಾಗುತ್ತಿತ್ತು. ಏಕೆ ಹೀಗಾಗುತ್ತದೆ ಎಂದು ತಿಳಿದಿರಲಿಲ್ಲ. ಒಂದು ದಿನ ದಿಢೀರ್ ನಿದ್ದೆಯಿಂದ ಎಚ್ಚರವಾದಾಗ ನಾನಿದ್ದ ಪರಿಸ್ಥಿತಿ ನೋಡಿ ಕಂಗಾಲಾದೆ. ಆಗ ನನಗೆ ಪ್ರತಿದಿನ ನನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಬೆಳಕಿಗೆ ಬಂತು' ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
 
"ನನ್ನ ಗಂಡ ನಾನು ನಿದ್ದೆಯಲ್ಲಿದ್ದಾಗ ಲೈಂಗಿಕವಾಗಿ ನನ್ನನ್ನು ಬಳಸಿಕೊಳ್ಳುತ್ತಿರುವುದನ್ನು  ನೋಡಿ ನನಗೆ ಶಾಕ್ ಆಯಿತು. ಆತ ಮುಂದೇನು ಮಾಡುತ್ತಾನೆ ಎಂದು ತಿಳಿಯಲು ನಾನು ನಿದ್ದೆಯಲ್ಲಿದ್ದಂತೆ ನಟಿಸಿದೆ. ಆಗ ಅಲ್ಲಿಂದ ಎದ್ದು ಹೋದ ಆತ ಕೆಳಮಹಡಿಗೆ ಹೋಗಿ ಕಂಪ್ಯೂಟರ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ವಿಕ್ಷೀಸತೊಡಗಿದ. ಅದನ್ನು ನೋಡಿ ದಂಗಾದ ಆಕೆ ಆತ ಕೆಲಸಕ್ಕೆ ಹೊರಟು ಹೋದ ಮೇಲೆ ತನ್ನ ನೆರಮನೆಗೆ ಹೋಗಿ ಎಲ್ಲಾ ಸಂಗತಿಯನ್ನು ತಿಳಿಸಿದ್ದಾಳೆ. ನಂತರ ಅವರ ಸಲಹೆಯಂತೆ ದೂರು ದಾಖಲಿಸಿದ್ದಾಳೆ. 
 
ತನಿಖೆ ವೇಳೆ ಆರೋಪಿ ಚಾರ್ಲಿಯ ಕಂಪ್ಯೂಟರ್‌ನ್ನು ಅನ್ಲಾಕ್ ಮಾಡಿದ ಪೊಲೀಸರಿಗೆ ಅದರಲ್ಲಿ 316 ಅಸಭ್ಯ ವಿಡಿಯೋಗಳು ದೊರೆತಿವೆ. ಅವೆಲ್ಲವೂ ಆಕೆಯ ಮೇಲೆ ಚಾರ್ಲಿ ಅತ್ಯಾಚಾರ ಎಸಗಿರುವ ವೀಡಿಯೋಗಳಾಗಿವೆ. ಆಗಲೇ ಸಾರಾಗೆ ತನ್ನ  ಪತಿಯ ಮತ್ತೊಂದು ದುಷ್ಕೃತ್ಯದ ಅರಿವಾಗಿದ್ದು. ಅವು ಅತ್ಯಂತ ಅಸಹ್ಯಕರವಾಗಿವೆ ಎಂದು ಪೊಲೀಸರು ಆಕೆಗೆ ಎಚ್ಚರಿಗೆ ನೀಡಿದರು. ಅದರಲ್ಲಿ 16 ವಿಡಿಯೋಗಳನ್ನು ಆಕೆ ವಿಕ್ಷೀಸಿದ್ದಾಳೆ.
 
 ಚಾರ್ಲಿ ಈಗ 12 ವರ್ಷ ಜೈಲು ಶಿಕ್ಷೆಗೊಳಗಾಗಿದ್ದಾನೆ. 

ವೆಬ್ದುನಿಯಾವನ್ನು ಓದಿ