ಚೀನಾದಲ್ಲಿ ಸೆಕ್ಸ್‌ಗಾಗಿ ಪ್ರವಾಸಿಯನ್ನು ಒತ್ತಾಯಿಸಿದ ಅರೆನಗ್ನ ಮಹಿಳೆ

ಶನಿವಾರ, 16 ಏಪ್ರಿಲ್ 2016 (18:23 IST)
ಮಹಿಳೆಯೊಬ್ಬಳು ವಿವಸ್ತ್ರಗೊಂಡು ಚೀನಾದ ಬೀದಿಯಲ್ಲಿ ಪ್ರವಾಸಿಯೊಬ್ಬನ ಮೈಮೇಲೆ ಬಿದ್ದು ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯಿಸಿದ ವಿಚಿತ್ರ ಘಟನೆ ಸಂಭವಿಸಿದೆ. ಅರೆ ನಗ್ನಾವಸ್ಥೆಯಲ್ಲಿದ್ದ ಮಹಿಳೆ ಕಪ್ಪು ಬೂಟುಗಳನ್ನು ಧರಿಸಿದ್ದು, ಪಾನಮತ್ತಳಾಗಿದ್ದು, ಪ್ರವಾಸಿಯೊಬ್ಬನಿಗೆ ತನ್ನ ಜತೆ ಸೆಕ್ಸ್ ಮಾಡುವಂತೆ ದುಂಬಾಲು ಬಿದ್ದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. 
 
ಅವಳ ಬಟ್ಟೆಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದವು. ದಾರಿಹೋಕರು ಬಿಟ್ಟ ಕಣ್ಣು ಬಿಟ್ಟಹಾಗೆ ಅಚ್ಚರಿಯಿಂದ ಈ ದೃಶ್ಯವೀಕ್ಷಿಸುತ್ತಿದ್ದರು. ಆದರೆ ಅವಳು ಪ್ರವಾಸಿಯ ಮೈಮೇಲೆ ಬಿದ್ದು ಸೆಕ್ಸ್ ಮಾಡುವಂತೆ ಒತ್ತಾಯಿಸಿದರೂ ಪ್ರವಾಸಿ ಮಾತ್ರ ಯಾವುದೇ ಆಸಕ್ತಿ ತೋರಿಸಲಿಲ್ಲ.

ಮಹಿಳೆ ವೇಶ್ಯೆ ಇರಬಹುದೇ ಎಂಬ ಅನುಮಾನವೂ ಕಾಡಿದ್ದು, ಚೀನಾದಲ್ಲಿ ಸೆಕ್ಸ್‌ಗಾಗಿ ಹಣ ವಿನಿಮಯ ಮಾಡಿಕೊಳ್ಳುವುದು ಕಾನೂನುಬಾಹಿರವಾಗಿದೆ. 

ವೆಬ್ದುನಿಯಾವನ್ನು ಓದಿ