ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸಿದ ಪ್ರೇಮಿಗಳಿಗೆ ಸಾರ್ವಜನಿಕವಾಗಿ 26 ಛಡಿಯೇಟು ನೀಡಿ ಅಪಮಾನ ಮಾಡಿದ ಅಮಾನುಷ ಘಟನೆ ಇಂಡೋನೇಶಿಯಾದ ಆಚೆಯಲ್ಲಿ ನಡೆದಿದೆ.
ಇಸ್ಲಾಂ ಕಾನೂನು ಉಲ್ಲಂಘಿಸಿದಕ್ಕಾಗಿ ಮಹಿಳೆಯನ್ನು ಸಾರ್ವಜನಿಕರೆದೆರು ಕೂರಿಸಿ ಕ್ರೂರ ಶಿಕ್ಷೆಯನ್ನು ನೀಡಲಾಗಿದ್ದು, ಮಹಿಳೆ ಮುಖ ಮುಚ್ಚಿಕೊಂಡು ಕುಳಿತಿರುವುದು ಚಿತ್ರದಲ್ಲಿ ಕಾಣುತ್ತಿದೆ.
ಇಂಡೋನೇಶಿಯಾದ 'ಆಚೆ' ಪ್ರಾಂತ್ಯದಲ್ಲಿ ಮಾತ್ರ ಶರಿಯಾ ಕಾನೂನು ಕಠಿಣವಾಗಿ ಜಾರಿಯಲ್ಲಿದ್ದು, ಮದುವೆಗಿಂತ ಮೊದಲು ಲೈಂಗಿಕ ಸಂಬಂಧ ಹೊಂದಿರುವುದನ್ನು ನಿಷೇಧಿಸಿದೆ.
ಈ ಕಠಿಣ ಶಿಕ್ಷೆಯ ವಿರುದ್ಧ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.