ಬುರ್ಖಾ ಧರಿಸಿದ್ದ ಮಹಿಳೆ: ವಿಚಾರಣೆ ನಡೆಸಲು ಜಡ್ಜ್ ನಕಾರ

ಶುಕ್ರವಾರ, 27 ಫೆಬ್ರವರಿ 2015 (11:22 IST)
ಇಲ್ಲಿನ ಕೋರ್ಟ್‌ರೂಂನಲ್ಲಿ  ಹಾಜರಾಗಿದ್ದ ಮುಸ್ಲಿಂ ಮಹಿಳೆಯೊಬ್ಬರಿಗೆ ಬುರ್ಖಾ ತೆಗೆಯುವವರೆಗೆ ಅವರ ಕೇಸ್ ವಿಚಾರಣೆ ನಡೆಸುವುದಿಲ್ಲ ಎಂದು ಕ್ಯುಬೆಕ್ ನ್ಯಾಯಾಧೀಶ ಖಡಾಖಂಡಿತವಾಗಿ ಹೇಳಿದ ಘಟನೆ ವರದಿಯಾಗಿದೆ.

ನ್ಯಾಯಾಧೀಶ ಎಲಿಯಾನ ಮರೆಂಗೊ  ಮುಖಪರದೆ ಧರಿಸಿದ್ದ ರಾನಿಯಾ ಎಲ್‌ಆಲ್‌ಔಲ್‌ಗೆ ಕೋರ್ಟ್‌ರೂಂ ಜಾತ್ಯತೀತ ಸ್ಥಳವಾಗಿದ್ದು, ಅವರು ಸೂಕ್ತವಾಗಿ ಉಡುಪು ಧರಿಸಿಲ್ಲ ಎಂದು ತಿಳಿಸಿದರು.ಹ್ಯಾಟ್‌ಗಳು ಮತ್ತು ಸನ್‌ಗ್ಲಾಸ್‌ಗಳಿಗೆ ಅವಕಾಶ ನೀಡುತ್ತಿಲ್ಲವಾದ್ದರಿಂದ ತಲೆಯ ಮೇಲಿನ ಬುರ್ಖಾಗೆ ಕೂಡ ಅವಕಾಶ ನೀಡುವುದಿಲ್ಲ ಎಂದು ಮಾರೆಂಗೊ ಹೇಳಿದರು.

ಕ್ಯುಬೆಕ್  ಆಟೋಮೊಬೈಲ್ ವಿಮಾ ಮಂಡಳಿ ಎಲ್ ಆಲ್ ಔಲ್  ಕಾರನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದರಿಂದ ಅದನ್ನು ವಾಪಸು ಪಡೆಯಲು ಎಲ್ ಆಲ್‌ಔಲ್  ಕೋರ್ಟ್‌ಗೆ ಆಗಮಿಸಿದ್ದರು. ಎಲ್‌ಆಲ್‌ಔಲ್ ಪುತ್ರ ಅಮಾನತಾದ ಪರವಾನಗಿಯಲ್ಲಿ ಕಾರು ಓಡಿಸಿದ್ದರಿಂದ ಪೊಲೀಸರು ಕಾರನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದರು.

ವೆಬ್ದುನಿಯಾವನ್ನು ಓದಿ