ಆನ್‌ಲೈನ್ ಮಾರಾಟ; ಕಿವಾ ಸಿಸ್ಟಮ್ಸ್ ಖರೀದಿಗೆ ಅಮೇಜಾನ್

ಬುಧವಾರ, 21 ಮಾರ್ಚ್ 2012 (15:51 IST)
PR
ಜಾಗತಿಕ ಪ್ರಸಿದ್ದ ಆನ್‌ಲೈನ್ ಮಾರಾಟ ಜಾಲ ಅಮೇಜಾನ್ ಡಾಟ್ ಕಾಮ್ ಇಂಕ್, ಕಿವಾ ಸಿಸ್ಟಂಸ್ ಇಂಕ್ ಸಂಸ್ಥೆಯನ್ನು ಶೀಘ್ರವೇ ಖರೀದಿಸಲಿದೆ. ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಮಾತುಕತೆ ನಡೆದಿದ್ದು 775 ದಶಲಕ್ಷ ಡಾಲರ್‌ಗೆ ಖರೀದಿಸಲು ಸಮ್ಮತಿಸಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಯಿಂದ ಬಹು ಉತ್ಪನ್ನಗಳ ಮಾರಾಟ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿದ್ದು, ಶೀಘ್ರವೇ ಆನ್‌ಲೈನ್ ಮಾರಾಟದಲ್ಲಿ ಮತ್ತೊಂದು ಶಕೆ ಆರಂಭವಾಗಲಿರುವುದಾಗಿ ಅಂದಾಜಿಸಲಾಗಿದೆ.

ಅದೇ ರೀತಿ ಆನ್‌ಲೈನ್ ಮಾರಾಟ ಕ್ಷೇತ್ರದಲ್ಲಿ ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆಯಾಗಲಿರುವುದಾಗಿಯೂ ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ