ಇನ್ನು ಮುಂದೆ ಕಂಪ್ಯೂಟರ್‌‌ ಉತ್ಪಾದನೆ ವಿಪ್ರೋ ಮಾಡುವುದಿಲ್ಲವಂತೆ ?

ಗುರುವಾರ, 5 ಡಿಸೆಂಬರ್ 2013 (17:13 IST)
PR
ಹೆಚ್‌‌ಸಿಎಲ್‌ ಮತ್ತು ಇನ್ಪೋಸಿಸ್‌‌‌ ನಂತರ ಸ್ವದೇಶದ ಕಂಪ್ಯೂಟರ್‌‌ ನಿರ್ಮಾಣದ ಸಂಸ್ಥೆಯಾದ ವಿಪ್ರೋ ಕಂಪ್ಯೂಟರ್‌ ಮತ್ತು ಸರ್ವರ ಉತ್ಪಾದನೆ ನಿಲ್ಲಿಸುವ ನಿರ್ಧಾರ ಕಂಪೆನಿ ತಗೆದು ಕೋಂಡಿದೆ . ಕಂಪೆನಿ ಮಾಹಿತಿ ತಂತ್ರಜ್ಞಾನದ ( ಸಾಪ್ಟವೇರ್‌) ಕಡೆಗೆ ಹೆಚ್ಚಿನ ಗಮನ ನೀಡುವುದಾಗಿ ಕಂಪೆನಿ ತಿಳಿಸಿದೆ.

ದೇಶದ ಮೂರನೇ ಅತಿ ದೊಡ್ಡ ಸಾಪ್ಟವೇರ್‌‌ ಕಂಪೆನಿಯಾದ ವಿಪ್ರೊ 1985 ರಲ್ಲಿ ಪರ್ಸನಲ್‌‌ ಕಂಪ್ಯೂಟರ್‌ ನಿರ್ಮಾಣ ಮಾಡಿತ್ತು. ಉತ್ತರಾ ಖಂಡ ಮತ್ತು ಪುದುಚೇರಿಯಲ್ಲಿ ಕಚೇರಿಗಳಿವೆ.

ಮಾರುಕಟ್ಟೆ ಬದಲಾಗಿದೆ ಮತ್ತು ಗ್ರಾಹಕರ ಬೇಡಿಕೆಗಳು ಕೂಡ ಬದಲಾಗಿವೆ. ಕಂಪೆನಿ ತಮ್ಮ ಕಂಪೆನಿ ಬಲವಾಗುವುದರ ಸಲುವಾಗಿ ಮತ್ತು ಐಟಿ ಕ್ಷೇತ್ರದಲ್ಲಿ ಮಾತ್ರ ಹೆಚ್ಚಿನ ಗಮನ ನೀಡುವ ಉದ್ದೇಶದಿಂದ ವಿಪ್ರೊ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿಪ್ರೋ ಕಂಪೆನಿಯ ಮುಖ್ಯ ಅಧಿಕಾರಿ ಎಸ್‌.ರಾಘವೇಂದ್ರ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ