ಗ್ರಾಹಕ ಧಾರಣೆ ಸೂಚ್ಯಂಕ ಬಾಂಡ್‌ ಮಾರುಕಟ್ಟೆಗೆ

ಬುಧವಾರ, 27 ನವೆಂಬರ್ 2013 (13:55 IST)
PTI
ಗ್ರಾಹಕ ಧಾರಣೆ ಸೂಚ್ಯಂಕ’ (ಸಿಪಿ ಐ) ಆಧರಿಸಿದ ಬಾಂಡ್‌ಗಳು ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿವೆ ಎಂದು ಹೇಳಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಇವು ಸಣ್ಣ ಹೂಡಿಕೆದಾರರ ಹಿತರಕ್ಷಣೆ ಮತ್ತು ಅವರ ಉಳಿತಾಯದ ಮೇಲೆ ಹಣದುಬ್ಬರದ ನಕಾರಾತ್ಮಕ ಪರಿಣಾಮವಾಗದಂತೆ ಜೋಪಾನ ಮಾಡಲಿವೆ ಎಂದು ಭರವಸೆಯ ಮಾತನಾಡಿದೆ.

‘ಸಿಪಿಐ ಇಂಡೆಕ್ಸ್ಡ್ ಬಾಂಡ್‌’ಗಳು 10 ವರ್ಷ ಅವಧಿಯವಾಗಿದ್ದು, ಡಿಸೆಂಬರ್‌ ಮಾಸಾಂತ್ಯಕ್ಕೂ ಮುನ್ನ ಮಾರುಕಟ್ಟೆ ಪ್ರವೇಶಿಸಲಿವೆ. ಈ ವರ್ಷ 10 ಸಾವಿರ ದಿಂದ 15 ಸಾವಿರ ಕೋಟಿ ಮೌಲ್ಯದ ಬಾಂಡ್‌ ಬಿಡುಗಡೆ ಆಗಲಿವೆ. ಈ ಕುರಿತ ಮಾರ್ಗಸೂಚಿ ಸದ್ಯದಲ್ಲೇ ಪ್ರಕಟವಾಗಲಿದೆ ಎಂದು ಆರ್‌ಬಿಐ ಡೆಪ್ಯುಟಿ ಗವ ರ್ನರ್‌ ಎಚ್‌.ಆರ್.ಖಾನ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ